ನವದೆಹಲಿ(ಡಿ ೨೦): ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಆಸ್ಟ್ರೇಲಿಯಾ ಆಟಗಾರರನ್ನು ಕೆಣಕಲು ಹೋಗಿದ್ದರು ಎಂಬುದರ ಬಗ್ಗೆ ಟೀಕೆಗಳು ಬಂದಿದ್ದವು,ಆದರೆ ವಿರಾಟ್ ಕೊಹ್ಲಿ ಅವರ ಆಕ್ರಮಣಕಾರಿ ನಿಲುವನ್ನು ಮಾಜಿ ವೇಗದ ಬೌಲರ್ ಜಹೀರ್ ಖಾನ್ ಬೆಂಬಲಿಸಿದ್ದಾರೆ.
ವಿರಾಟ್ ಗೆ ಯಶಸ್ಸು ತಂದುಕೊಟ್ಟ ಅಗ್ರೆಶನ್ ಆಟದ ಮಾನದಂಡವನ್ನು ಮುಂದುವರಿಸಬೇಕು , ನಿಮ್ಮ ಯಶಸ್ಸಿನ ಮಂತ್ರದಿಂದ ದೂರ ಹೋಗಬಾರದು ,ಇತರೆ ಆಟಗಾರರು ಏನು ಹೇಳುತ್ತಾರೆಂಬುದು ಮುಖ್ಯವಲ್ಲ ,ಆಸ್ಟ್ರೇಲಿಯಾ ಸರಣಿಯು ಯಾವತ್ತೂ ಬಹುತೇಕ ಒತ್ತಡದಿಂದ ಕೂಡಿರುತ್ತದೆ ಎಂದು ಜಹೀರ್ ಖಾನ್ ಹೇಳಿದ್ದಾರೆ .