ಚಂಡೀಗಡ್(ಜ:10):ಪಂಜಾಬ್ ಸರ್ಕಾರದ ಸಂಪುಟ ಸಚಿವ ನವಜೋತ್ ಸಿಂಗ್ ಸಿಧುರವರಿಗೆ ಬರುತ್ತಿರುವ ಜೀವ ಬೆದರಿಕೆಗಳಿಂದ ಭದ್ರತೆ ಹೆಚ್ಚಿಸಲಾಗಿದೆ.

ರಾಜ್ಯ ಸರ್ಕಾರವು ಸಿಧು ಅವರಿಗೆ ಬುಲೆಟ್ ಪ್ರೂಫ್ ಕ್ರೂಜರ್ ನೀಡಿದ್ದು,ಸದ್ಯ ಸಿಧು ಅವರಿಗೆ ಭದ್ರತೆ ಹೆಚ್ಚಿಸಿ Z Plus ಸೆಕ್ಯೂರಿಟಿ ನೀಡಲಾಗಿದೆ. ಈ ಹಿಂದೆ ಇದ್ದ 12 ಮಂದಿ ಸಿಬ್ಬಂದಿಗಳ ಸಂಖ್ಯೆಯನ್ನು 25ಕ್ಕೆ ಏರಿಸಲಾಗಿದೆ.

ಸಿಧು ಗೆ ಕೇವಲ ರಾಜಕೀಯಕ್ಕೆ ಪ್ರೇರಿತ ಜೀವ ಬೆದರಿಕೆ ಅಲ್ಲದೇ,ಡ್ರಗ್ಸ್,ಮೈನಿಂಗ್ ಮಾಫಿಯಾ ಕ್ಷೇತ್ರಗಳಿಂದಲೂ ಬೆದರಿಕೆಗಳು ಬಂದಿವೆ ಎನ್ನಲಾಗಿದೆ.