ಬೆಂಗಳೂರು(ಫೆ,12): ಬಾಕ್ಸ್ ಆಫಿಸ್ ಸುಲ್ತಾನ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ದಿ ಮೋಸ್ಟ್ ಅವೈಟೆಡ್ ಸಿನಿಮಾ ‘ಯಜಮಾನ.’ ಸ್ಯಾಂಡಲ್‍ವುಡ್‍ನಲ್ಲಿ ಸದ್ಯಕ್ಕೆ ಭರ್ಜರಿ ಸದ್ದು ಮಾಡುತ್ತಿದೆ. ಈ ಸಿನಿಮಾದ ಟ್ರೈಲರ್‍ಗೆ ಯೂಟ್ಯೂಬ್ ಮಾರು ಹೋಗಿದೆ.

ಹೌದು ‘ಯಜಮಾನ’ ಟ್ರೈಲರ್ ರಿಲೀಸ್ ಆದ 24 ಗಂಟೆಗಳಲ್ಲಿಯೇ ಕೋಟಿ ಮಂದಿ ವೀಕ್ಷಿಸಿದ್ದಾರೆ. ಈ ರೆಸ್ಪಾನ್ಸ್‍ಗೆ ಅಚ್ಚರಿ ವ್ಯಕ್ತಪಡಿಸಿದ ಯೂಟ್ಯೂಬ್ ಸಂಸ್ಥೆ ಈ ಅತಿಥಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ನೀವು ನೋಡಿದರೆ ತಿಳಿಯುತ್ತದೆ’ ಎಂದು ಟ್ಟೀಟ್ ಮಾಡಿದೆ.

ಇದೇ ಮೊದಲು ಕನ್ನಡ ಸಿನಿಮಾವೊಂದರ ಬಗ್ಗೆ ಯೂಟ್ಯೂಬ್ ತನ್ನ ಟ್ವೀಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.

ಹೃದಯ ತುಂಬಿ ಬಂತು ಕನ್ನಡ ಚಿತ್ರರಂಗದ ರಹದಾರಿ ಕಂಡು. ಹಾರಲಿ ಏರಲಿ ಕನ್ನಡದ ಭಾವುಟ. ಯಜಮಾನ ತಂಡಕ್ಕೆ ಬೆಸ್ಟ್ ಆಫ್ ಲಕ್, ಎಂದು ನವರಸ ನಾಯಕ ಜಗ್ಗೇಶ್ ರೀ ಟ್ವೀಟ್ ಮಾಡಿದ್ದಾರೆ.’

ಒಟ್ಟಾರೆ ಕನ್ನಡ ಸಿನಿಮಾಗಳು ಇಂಟರ್ ನ್ಯಾಶನಲ್ ಮಟ್ಟದಲ್ಲಿ ಸೌಂಡ್ ಮಾಡುತ್ತಿರುವುದು ಕನ್ನಡ ಅಭಿಮಾನಿಗಳಲ್ಲಿ ಭಾರೀ ಸಂತೋಷಕ್ಕೆ ಕಾರಣವಾಗಿದೆ. ಇನ್ನು ಯಜಮಾನ ಸಿನಿಮಾದ ಟ್ರೈಲರ್ ವಿಕ್ಷೀಸಿದ ದರ್ಶನ್ ಅಭಿಮಾನಿಗಳು ಸಿನಿಮಾ ನೋಡಲು ಕಾತುರರಾಗಿದ್ದಾರೆ.