ಬೆಂಗಳೂರು:(ಫೆ12): ಇದೇ ಮೊದಲ ಬಾರಿಗೆ ಕನ್ನಡ ಚಿತ್ರದ ಬಗ್ಗೆ ಯೂಟ್ಯೂಬ್ ಟ್ವೀಟ್ ಮಾಡಿದೆ.

ಇತ್ತೀಚೆ ಸಿನಿಮಾ ಕ್ಷೇತ್ರದಲ್ಲಿ ಸ್ಯಾಂಡಲ್‍ವುಡ್ ಸಿನಿಮಾಗಳು ಹೆಸರು ಮಾಡುತ್ತಿವೆ. ಕನ್ನಡ ಸಿನಿಮಾವನ್ನು ದೇಶದಲ್ಲಿ ನೋಡುಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಚಂದನವನÀದ ಸುಗಂಧ ಎಲ್ಲೆಡೆ ಬೀರುತ್ತಿದೆ.

ಇನ್ನು ಯೂಟೂಬ್‍ನಲ್ಲಿ ಕನ್ನಡ ಸಿನಿಮಾಗಳ ಟ್ರೇಲರ್, ಸಾಂಗ್‍ಗಳಿಗೆ ಭಾರೀ ಮೆಚ್ಚುಗೆ ಬರುತ್ತಿವೆ. ಒಂದೊಂದು ಸಿನಿಮಾಗಳ ಮೇಲೆಯೂ ಅಭಿಮಾನಿಗಳ ನಿರೀಕ್ಷೆಯ ಮಟ್ಟ ತಾರಕಕ್ಕೇರಿದೆ.

ಸ್ಯಾಂಡಲ್‍ವುಡ್‍ನಲ್ಲಿ ನಿರ್ಮಾಣವಾಗುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ “ಯಜಮಾನ” ಚಿತ್ರದ ಹಾಡುಗಳಿಗೆ ಹಾಗೂ ಟ್ರೇಲರ್‍ಗೆ ಭಾರೀ ಮೆಚ್ಚುಗೆ ಬರುತ್ತಿವೆ. ಯೂ ಟ್ಯೂಬ್‍ನಲ್ಲಿ ರಿಲೀಸ್ ಆದ ಯಜಮಾನ ಚಿತ್ರದ ಟ್ರೇಲರ್‍ನನ್ನು 24 ಗಂಟೆಯೊಳಗೆ ಕೋಟಿ ಮಂದಿ ವೀಕ್ಷಿಸಿದ್ದಾರೆ.

ಅಭಿಮಾನಿಗಳ ರೆಸ್ಪಾನ್ಸ್‍ಗೆ ಯೂಟ್ಯೂಬ್ ಸಂಸ್ಥೆ ಅಚ್ಚರಿ ವ್ಯಕ್ತಪಡಿಸುವುದರ ಜೊತೆಗೆ ನೀವು ನೋಡಿದರೆ ತಿಳಿಯುತ್ತದೆ ಎಂದು ಟ್ವೀಟ್ ಮಾಡಲಾಗಿದೆ. ಇನ್ನು ನವರಸ ನಾಯಕ ರೀ-ಟ್ವೀಟ್ ಮಾಡಿ ” ಹೃದಯ ತುಂಬಿ ಬಂತು ಕನ್ನಡ ಚಿತ್ರರಂಗದ ರಹದಾರಿಕಂಡು ಹಾರಲಿ ಏರಲಿ ಕನ್ನಡದ ಬಾವುಟ ಎನ್ನುವುದರ ಜೊತೆಗೆ ನಾನು ಚಿತ್ರಮಂದಿರದಲ್ಲೆ ನೋಡಿ ಬೆಂಬಲಿಸುವೆ. ಇಡೀ “ಚಿತ್ರ ತಂಡಕ್ಕೆ ಬೆಸ್ಟ್ ಆಫ್ ಲಕ್ ಟು ಎಂಟೈರ್ ಟೀಮ್” ಎಂದು ಟ್ವೀಟ್ ಮಾಡಿದ್ದಾರೆ.