ನಕಲಿ ವಿಡಿಯೋ ಹಾಗೂ ನಕಲಿ ಪೋಸ್ಟ್ ಗಳ ಮೂಲಕ ಸುಳ್ಳು ಸುದ್ದಿ ಮತ್ತು ಅತಿರಂಜಕ ಸುದ್ದಿಗಳ ಮೂಲಕ ಹಣ ಗಳಿಸುತ್ತಿದ್ದ ಯೂಟ್ಯೂಬರ್ ಗಳ ತಡೆಗೆ ಗೂಗಲ್ ಒಡೆತನದ ವಿಡಿಯೋ ತಾಣ ಯೂಟ್ಯೂಬ್ ದೇಶದಲ್ಲಿ ಗಂಭೀರ ಕ್ರಮ ಕೈಗೊಳ್ಳುತ್ತಿದ್ದು,ನೂತನವಾಗಿ ಫ್ಯಾಕ್ಟ್ ಚೆಕ್ ಪಾಪ್ ಅಪ್ ಫೀಚೆರ್ ಅನ್ನು ಪರಿಶೀಲಿಸುತ್ತಿರುವಾಗಿ ಮಾಧ್ಯಮಗಳ ವರದಿಯಲ್ಲಿ ತಿಳಿಸಿದೆ.

ಚುನಾವಣೆಯ ಸಂದರ್ಭದಲ್ಲಿ ಪ್ರಚಾರಕ್ಕೆಂದು ಮತ್ತು ಸಮಾಜದಲ್ಲಿ ತಪ್ಪು ಸಂದೇಶ ಹರಡಿಸಿ ಜನರಲ್ಲಿ ದ್ವೇಷ ಮೂಡಿಸುವ ಪ್ರಕರಣಗಳು ಹೆಚ್ಚಾಗುತ್ತಿದ್ದು,ಅವುಗಳನ್ನು ತಡೆಯಲು ಯೂಟ್ಯೂಬ್ ಸಂಸ್ಥೆ ಮುಂದಾಗಿದೆ ಎನ್ನಲಾಗಿದೆ. ಹಾಗಾಗಿ ಇದೇ ಮೊದಲಬಾರಿಗೆ ಭಾರತದಲ್ಲಿ ಫ್ಯಾಕ್ಟ್ ಚೆಕ್ ಪಾಪ್ ಅಪ್ ಫೀಚೆರ್ ಅನ್ನು ಪರಿಶೀಲಿಸುತ್ತಿದ್ದು ತಪ್ಪು ಮಾಹಿತಿ,ಸುಳ್ಳು ಸುದ್ದಿಗಳನ್ನು ಹರಿಬಿಡುವ ವಿಡಿಯೋಗಳ ಮೇಲೆ ಕ್ರಮ ಕೈಗೊಳ್ಳಲಿದೆ ಎಂದು ಹೇಳಲಾಗಿದೆ.