ಅಕ್ಟೋಬರ್(ಅ.03) ನವರಾತ್ರಿ ಹಬ್ಬದ ಪ್ರಯುಕ್ತವಾಗಿ ಅಕ್ಷಯ್ ಕುಮಾರ್ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಅದರ ಜೊತೆಯ ಶಾಕ್ ಕೂಡ ನೀಡಿದ್ದಾರೆ.

ಅಕ್ಷಯ್ ಕುಮಾರ್ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹೊಸ ಪೋಸ್ಟರ್ ಒಂದನ್ನು ಅಪ್ಲೋಡ್ ಮಾಡಿದ್ದು, ಆ ಪೋಸ್ಟರ್ ನಲ್ಲಿ ಅಕ್ಷಯ್ ಸೀರೆಯನ್ನು ಉಟ್ಟುಕೊಂಡಿದ್ದಾರೆ. ಸದ್ಯ ಅಕ್ಷಯ್ ಕುಮಾರ್ ಹಾರರ್ ಕಾಮಿಡಿ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಈ ಹಿಂದೆಯೂ ಅವರು ಹಾರರ್ ಚಿತ್ರದಲ್ಲಿ ನಟಿಸಿದ್ದಾರೆ. ಈಗ ಲಕ್ಷ್ಮಿ ಬಾಂಬ್ ಎನ್ನುವ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ನವರಾತ್ರಿ ಹಬ್ಬದ ಅಂಗವಾಗಿ ಅಕ್ಷಯ್​ ಚಿತ್ರದ ಪೋಸ್ಟರ್ ಅನ್ನು ಹಂಚಿಕೊಂಡಿದ್ದು, ​ ಅಭಿಮಾನಿಗಳು ಫೋಟೋ ನೋಡಿ ಹೈರಾಣಾಗಿದ್ದಾರೆ. ಸೀರೆಯುಟ್ಟು ದುರ್ಗಿಯ ಮುಂದೆ ನಿಂತಿರುವ ಅಕ್ಷಯ್​ ಅವರನ್ನು ನೋಡಿದರೆ ಅವರು ಇದೇ ಮೊದಲ ಬಾರಿಗೆ ತೃತೀಯ ಲಿಂಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋದು ತಿಳಿಯುತ್ತವೆ.