ನೀವು ಮತ್ತೊಮ್ಮೆ ಪ್ರಧಾನಿ ಆಗಿ: ಮೋದಿ ಅವರನ್ನು ಹಾಡಿ ಹೊಗಳುವ ಮೂಲಕ ಇಡೀ ಸದನಕ್ಕೆ ಶಾಕ್ ಕೊಟ್ಟ ಮುಲಾಯಂ ಸಿಂಗ್

ನವದೆಹಲಿ(ಫೆ.14): ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರು ಪ್ರಧಾನಿ ಮೋದಿ ಅವರನ್ನು ಹಾಡಿ ಹೊಗಳುವ ಮೂಲಕ ಇಡೀ ಸದನಕ್ಕೆ ಶಾಕ್ ಕೊಟ್ಟಿದ್ದಾರೆ. ತಮ್ಮ ರಾಜಕೀಯ ಜೀವನವಿಡೀ ಬಿಜೆಪಿಯನ್ನ ವಿರೋಧಿಸಿಕೊಂಡು ಬಂದಿದ್ದ ಮುಲಾಯಂ ಸದನದಲಿ ಮೋದಿ ಪರವಾಗಿ ಮಾತನಾಡಿದ್ದಾರೆ.

ಹೌದು ಮುಲಾಯಂ ಸಿಂಗ್ ಸದನದಲ್ಲಿ ಇಲ್ಲಿರುವ ಪ್ರತಿಯೊಬ್ಬ ಸದಸ್ಯರೂ ಮತ್ತೊಮ್ಮೆ ಗೆದ್ದು ಬನ್ನಿರಿ. ಮೋದಿ ಮತ್ತೊಮ್ಮೆ ಪ್ರಧಾನಿ ಆಗಿ, ಎಂದು ಹೇಳಿದ್ದಾರೆ.

ಇನ್ನು ಮುಲಾಯಂ ಅವರ ಹೇಳಿಕೆ ಮುಗಿಯುತ್ತಲೇ ಪ್ರಧಾನಿ ನರೇಂದ್ರ ಮೋದಿ ಅವರು ನಗುತ್ತಾ ಕೈ ಮುಗಿದರು.

ಈ ಕುರಿತು ಪ್ರತಿಕ್ರಿಯೇ ನೀಡಿರುವ ಸಮಾಜವಾದಿ ಪಕ್ಷದ ವಕ್ತಾರ ಸುನೀಲ್ ಸಿಂಗ್ ಸಾಜನ್, ಸಂಸತ್‍ನಲ್ಲಿ ಮುಲಾಯಂ ಸಿಂಗ್ ಯಾದವ್ ಅವರು ಮೋದಿ ಅವರನ್ನು ಹೊಗಳಿರುವುದಕ್ಕೆ ಯಾವುದೇ ವಿಶೇಷ ಅರ್ಥ ಕಲ್ಪಿಸಲು ಆಗುವುದಿಲ್ಲ ಎಂದು ಹೇಳಿದ್ದಾರೆ.

ಅಧಿವೇಶನದ ಕೊನೆಯ ದಿನ ಪ್ರತಿಯೊಬ್ಬ ಸಂಸದನೂ ಇತರರಿಗೆ ಶುಭ ಹಾರೈಕೆ ಮಾಡುವುದು ಒಂದು ರೀತಿಯಲ್ಲಿ ಸಂಪ್ರದಾಯವಾಗಿದೆ. ಅವರು ಪ್ರಧಾನಿ ಮೋದಿ ಅವರನ್ನೂ ಒಳಗೊಂಡಂತೆ ಎಲ್ಲರಿಗೂ ವಿಜಯ ಪ್ರಾಪ್ತಿಯಾಗಲಿ ಎಂದು ಹಾರೈಸಿದ್ದಾರೆ ಎಂದು ಸುನೀಲ್ ಸಿಂಗ್ ಹೇಳಿದ್ದಾರೆ.

ಒಟ್ಟಾರೆ ಮುಲಾಯಂ ಮಾತು ಇಡೀ ರಾಜಕಾರಣದಲ್ಲಿ ಅಚ್ಚರಿ ಮೂಡಿಸಿದೆ.