ಮುಂಬೈ(ಜ,17): ರಿಷಬ್ ಪಂತ್ ಭಾರತೀಯ ಕ್ರಿಕೆಟ್‍ನಲ್ಲಿ ಅತ್ಯಂತ ಹೆಸರುವಾಸಿಯಾಗಿರುವ ಹೆಸರುಗಳಲ್ಲಿ ಒಂದು. ಸ್ವಲ್ಪ ಸಮಯದ ಅವಧಿಯಲ್ಲಿಯೇ ತನ್ನ ಅದ್ಬುತ ಆಟದ ಪ್ರದರ್ಶನದಿಂದ ಟೆಸ್ಟ್ ತಂಡದಲ್ಲಿ ಅವರು ತಮ್ಮ ಸಾಮಥ್ರ್ಯವನ್ನು ಭದ್ರಪಡಿಸಿಕೊಂಡಿದ್ದಾರೆ. ಪ್ರತಿ ಸರಣಿಯಲ್ಲೂ ವಿಕೆಟ್ ಕೀಪರ್ ಆಗಿ ಉತ್ತಮ ಪ್ರದರ್ಶನ ನೀಡುತ್ತಿರುವ 21 ವರ್ಷದ ರಿಷಬ್ ಎಂಎಸ್ ಧೋನಿಗೆ ಪರಿಪೂರ್ಣ ಉತ್ತರಾಧಿಕಾರಿ ಆಗುತ್ತಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತೀವೆ.

ಈ ವರ್ಷ ಭಾರತೀಯ ವಿಕೆಟ್ ಕಿಪರ್ ಆಗಿ ಅತ್ಯುನ್ನತ ರೇಟಿಂಗ್ ಪಾಯಿಂಟ್‍ಗಳ ದಾಖಲೆಯನ್ನು ನಿರ್ಮಿಸಿದ್ದಾರೆ. ಇದಲ್ಲದೆ ಸಿಡ್ನಿಯಲ್ಲಿ ಶತಕವನ್ನು ಗಳಿಸಿದ ಅವರು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಎರಡರಲ್ಲೂ ಟ್ರಿಪಲ್ ವಿಕೆಟ್‍ಗಳನ್ನು ಗಳಿಸಿದ ಮೊದಲ ಭಾರತೀಯ ಕೀಪರ್ ಆಗಿದ್ದಾರೆ.

ರಿಷಬ್ ಸಾಮಾಜಿಕ ಜಾಲತಾಣದಲ್ಲಿ ಆನೇಕ ಪೋಸ್ಟರ್ ಗಳನ್ನು ಆಪ್ಲೋಡ್ ಮಾಡುತ್ತಿರುತ್ತಾರೆ. ಆದರೆ ಇತ್ತೀಚಿಗೆ ಪೋಸ್ಟ್ ಮಾಡಿರುವ ಒಂದು ಫೋಟೊ ಮತ್ರ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಹೌದು, ರಿಷಬ್ ಅವರು ಇಶಾ ನೇಗಿ ಎಂಬ ಹುಡುಗಿಯನ್ನು ಪ್ರಿತಿಸುತ್ತಿದ್ದು, ಅದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಇನ್‍ಸ್ಟಾಗ್ರಾಮ್ ಗೆ ಇಶಾ ಜೊತೆಗಿನ ಪೋಟೋ ಪೋಸ್ಟ್ ಮಾಡಿ ನಾನು ತುಂಬಾ ಖುಷಿಯಾಗಿರಲು ಕಾರಣ ನೀನು ಎಂದು ಬರೆದುಕೊಂಡಿದ್ದಾರೆ. ಇನ್ನು ಇದೆ ಫೋಟೋವನ್ನು ಶೇರ್ ಮಾಡಿರುವ ಇಶಾ, ನನ್ನ ಆತ್ಮೀಯ, ನನ್ನ ಜೀವನದ ಪ್ರೀತಿ, ಲವ್ ಯೂ ರಿಷಬ್ ಎಂದು ಪ್ರತಿಕ್ರಿಯಿಸಿದ್ದಾರೆ.

ಇಶಾ, ಉದ್ಯಮಿ ಮತ್ತು ಇಂಟೀರಿಯಲ್ ಡಿಸೈನರ್ ಆಗಿದ್ದು, ದೆಹಲಿಯ ಅಮಿಟಿ ವಿಶ್ವವಿದ್ಯಾಲಯದಲ್ಲಿ ಸಾಹಿತ್ಯವನ್ನು ಓದುತಿದ್ದಾರೆ.