ಬೆಂಗಳೂರು(ಜ.17) ಆಪರೇಷನ್ ಕಮಲದ ತಂತ್ರ ರೂಪಿಸಿ ಮೈತ್ರಿ ಸರ್ಕಾರವನ್ನು ಉರುಳಿಸಲು ಬಿಜೆಪಿ ರಾಜ್ಯಧ್ಯಕ್ಷ ಯಡಿಯೂರಪ್ಪ ಸಂಚು ರೂಪಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಯುವ ಕಾರ್ಯಕರ್ತರು ಶಿವಮೊಗ್ಗದ ಯಡಿಯೂರಪ್ಪ ಮನೆಗೆ ಮುತ್ತಿಗೆ ಹಾಕಿದ್ದಾರೆ.


ಬಿ.ಎಸ್ ಯಡಿಯೂರಪ್ಪ ಅವರಿಗೆ ಬುದ್ಧಿ ಭ್ರಮಣೆ ಆಗಿದೆ. ಅವರ ಮಕ್ಕಳು ಕುದುರೆ ವ್ಯಾಪಾರದಲ್ಲಿ ಬ್ಯೂಸಿ ಆಗಿರುವುದರಿಂದ ಅಪ್ಪನನ್ನು ವೈದ್ಯರ ಬಳಿ ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಆದ್ದರಿಂದ ನಾವೇ ಉತ್ತಮ ಚಿಕಿತ್ಸೆಗಾಗಿ ಇಲ್ಲಿನ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡುತ್ತೇವೆ ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರು ಒಪಿಡಿ ಚೀಟಿ ಸಮೇತ ಮುತ್ತಿಗೆ ಹಾಕಿದ್ದಾರೆ.

ಈ ಪ್ರತಿಭಟನೆ ನೇತೃತ್ವವನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಪ್ರವೀಣ್ ಕುಮಾರ್, ಸದಸ್ಯರಾದ ಎಚ್.ಸಿ ಯೋಗೀಶ್, ಕೆ.ರಂಗನಾಥ್, ಹೆಚ್.ಪಿ ಗಿರೀಶ್, ನೀತಿನ್ ರಾವ್ ಮುಂತಾದವರ ಸಮ್ಮಖದಲ್ಲಿ ಪ್ರತಿಭಟನೆ ಮುಂದುವರಿದಿದೆ.