ಬೆಂಗಳೂರು(ಫೆ:08): ಇಂದಿನ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಯಡಿಯೂರಪ್ಪನವರು ಜೆಡಿಎಸ್ ಶಾಸಕ ನಾಗನಗೌಡ ಕಂದಕೂರು ರವರಿಗೆ ಆಮಿಷ ನೀಡಿದ ಆಡಿಯೋ ಬಿಡುಗಡೆ ಮಾಡಿದ್ದಾರೆ.ಖುದ್ದಾಗಿ ಯಡಿಯೂರಪ್ಪ ನವರು ಮಾತನಾಡಿದ್ದಾರೆ,ಇದರಲ್ಲಿ ದೇಶದ ಜಡ್ಜ್ ಗಳನ್ನೇ ಬುಕ್ ಮಾಡಿದವರು ನಾವು ಎಂದು ಹೇಳಿದ್ದಾರೆ.ಇದಕ್ಕೆಲ್ಲ ರಾಷ್ಟ್ರ ಸಮಿತಿ ಬೆಂಬಲವಿದೆ,ನೀವು ಪಕ್ಷಕ್ಕೆ ಬನ್ನಿ,ಎಲ್ಲಾ ಅನುಕೂಲ ಮಾಡಿ ಕೊಡುತ್ತೇವೆ ಎಂದಿದ್ದಾರೆ.ಪತ್ರಿಕಾ ಗೋಷ್ಠಿಯಲ್ಲಿ ನಾಗನಗೌಡ ಕಂದಕೂರು ಅವರ ಮಗ ಶರಣ ಗೌಡ ಕೂಡ ಇದ್ದರು.