ಮುಂಬೈ(ಜ.23):ಹಿರಿಯ ನಟಿ ಮತ್ತು ಬಿಜೆಪಿ ಸಂಸದೆ ಹೇಮಾ ಮಾಲಿನಿ ವಾರಣಾಸಿಯಲ್ಲಿ ನಡೆದ ಭಾರತೀಯ ಪ್ರವಾಸಿ ದಿವಸದಲ್ಲಿ 90 ನಿಮಿಷಗಳ ಕಾಲ ನೃತ್ಯ ನಾಟಕವನ್ನು ಮಾಡಿದ್ದು, ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಫುಲ್ ಫಿದಾ ಆಗಿದ್ದಾರೆ.

ಹೇಮಾ ಮಾಲಿನಿ, ನೃತ್ಯದಲ್ಲಿ ಭಾರತದ ಪವಿತ್ರ ಗಂಗಾನದಿಯ ಇತಿಹಾಸವನ್ನು ಮತ್ತು ಇಂದಿನ ದಿನಗಳಲ್ಲಿ ಹೇಗೆ ಈ ನದಿ ಮಾಲಿನ್ಯವನ್ನು ಹೊಂದುತ್ತಿದೆ ಎಂಬುದನ್ನು 90 ನಿಮಿಷಗಳ ಕಾಲ ವೇದಿಕೆಯ ಮೇಲೆ ತೆರೆದಿಟ್ಟರು. ಇದನ್ನು ವಿಕ್ಷೀಸಿದ ಸುಷ್ಮಾ, ಪ್ರದರ್ಶನದ ಬಗ್ಗೆ ವರ್ಣಿಸಲು ನನಗೆ ಪದಗಳಿಲ್ಲ, ನಿಮ್ಮ ಅಭಿನಯಕ್ಕಾಗಿ ನಾನು ಪ್ರಸಿದ್ಧ ಟಿವಿ ಕಾರ್ಯಕ್ರಮಗಳಿಂದ ಮೊದಲ ಬಾರಿಗೆ ಮೂರು ಪದಗಳನ್ನು ತೆಗೆದುಕೊಳ್ಳುತ್ತಿದ್ದೇನೆ- ಅದ್ಭುತ, ನಂಬಲಾಗದ ಮತ್ತು ಊಹಾತೀತ ಎಂದು ಪ್ರಶಂಸಿಸಿದ್ದಾರೆ.

ಇನ್ನು ಅಭಿನಯಕ್ಕೂ ಮೊದಲು ಟ್ವೀಟ್ ಮಾಡಿರುವ ಹೇಮಾ ಮಾಲಿನಿ ಇದು ನನ್ನ ಕನಸ್ಸಿನ ಯೋಜನೆ ಎಂದು ಬರೆದುಕೊಂಡಿದ್ದರು.