ಚೆನೈ(ಜ.14): ಉಬರ್ ಕ್ಯಾಬ್‍ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಜನಪ್ರಿಯ ಕಸ್ಟ್ಯೂಮ್ ಡಿಸೈನರ್ ಮತ್ತು ಸ್ಟೈಲಿಸ್ಟ್ ಪಲ್ಲವಿ ಸಿಂಗ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪರಾಗಿದ್ದಾರೆ.

ಪಲ್ಲವಿ ಕ್ಯಾಬ್ ನಲ್ಲಿ ಚಲಿಸುತ್ತಿದ್ದ ವೇಳೆ ಕ್ಯಾಬ್‍ನ ಒಳಗಡೆ ಸುಟ್ಟ ವಾಸನೆ ಬಂದ ಕೆಲವು ನಿಮಿಷದಲ್ಲಿಯೇ ಬೆಂಕಿ ಕಂಡುಬಂದಿದೆ. ತಕ್ಷಣ ಪಲ್ಲವಿ ಮತ್ತು ಕ್ಯಾಬ್ ಚಾಲಕ ಕಾರಿನಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ.

ಇನ್ನು ಈ ಭಯನಕ ಅನುಭವದ ಈ ವಿಡೀಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪಲ್ಲವಿ ಹಂಚಿಕೊಂಡಿದ್ದು, ಈ ಘಟನೆ ನನ್ನ ಜೀವನದ ಅಂತ್ಯತ ಭಯಾನಕ ಕ್ಷಣ, ಇದರಿಂದ ನನಗೆ ಹೊರಬರಲು ಸಾಧ್ಯವಾಗುತ್ತಿಲ್ಲ ಎಂದು ಇನ್ಸ್ಟಾಗ್ರಾಂ ನಲ್ಲಿ ಫೋಸ್ಟ್ ಮಾಡಿದ್ದಾರೆ.

ಉಬರ್ ಗೆ ಇದರ ಬಗ್ಗೆ ಅರಿವಿರಲಿಲ್ಲ ಮತ್ತು ಇಲ್ಲಿಯ ವರೆಗೂ ಮಾಹಿತಿಗಾಗಿ ನನ್ನನ್ನು ಸಂಪರ್ಕಿಸಿಲ್ಲ. ಇದು ಅವರ ಅಜಾಗರೂಕತೆ, ಅಜ್ಞಾನ, ಹಾಗೂ ಗ್ರಾಹಕರ ಬಗ್ಗೆ ಇರುವ ಬೇಜವಾಬ್ದಾರಿಯನ್ನು ತೋರಿಸುತ್ತದೆ ಎಂದು ಪಲ್ಲವಿ ಟ್ವೀಟ್ ಮಾಡಿದ್ದಾರೆ. ಇನ್ನು ರಿಟ್ವೀಟ್ ಮಾಡಿರುವ ಉಬರ್ ಇಂಡಿಯಾ, ಇದರ ಬಗ್ಗೆ ತನಿಖೆ ಕೈಗೊಳ್ಳುವುದಾಗಿ ಹೇಳಿದೆ.