ಬೆಂಗಳೂರು:(ಫೆ19): ಏರ್ ಶೊ ರಿಹಾರ್ಸಲ್ ವೇಳೆ ಎರಡು ಸೂರ್ಯ ಕಿರಣ ವಿಮಾನಗಳು ಡಿಕ್ಕಿ ಹೊಡೆದ ಘಟನೆ ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಸಂಭವಿಸಿದೆ. ಇದರಲ್ಲಿ ಒಬ್ಬ ಪೈಲೆಟ್ ಸಾವನ್ನಪ್ಪಿದ್ದಾರೆ.

ಬೆಂಗಳೂರಿನಲ್ಲಿ ಏರ್ ಶೋ ಗೆ ಒಂದೇ ದಿನ ಬಾಕಿಯಿರುವಾಗ, ರಿಹಾರ್ಸಲ್ ವೇಳೆ ದುರ್ಘಟನೆ ನಡೆದಿದ್ದು, ಒಬ್ಬ ಫೈಲೆಟ್ ಸಾವನ್ನಪ್ಪಿದ್ದಾರೆ, ಸೂರ್ಯಕಿರಣ 7 ಪೈಟರ್ ಜೆಟ್ ವಿಂಗ್ ಕಮಾಂಡರ್ ಸಾಹಿಲ್ ಗಾಂಧಿ(36) ಈ ದುರಂತದಲ್ಲಿ ಮೃತಪಟ್ಟವರು ಎಂದು ತಿಳಿದು ಬಂದಿದೆ.

ಇನ್ನು ಗಾಯಗೊಂಡಿರುವ ಪೈಲೆಟ್‍ಗಳಾದ ವಿಂಗ್ ಕಮಾಂಡರ್ ವಿಜಯ್ ಶೇಳ್ಕೆ, ಸ್ಕ್ವಾಡ್ರನ್ ಲೀಡರ್ ತೇಜೇಶ್ವರ್ ಸಿಂಗ್ ಅವರನ್ನು ಏರ್ ಲಿಫ್ಟ್ ಮೂಲಕ ಕಮಾಂಡೋ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.