ನವದೆಹಲಿ:(ಫೆ28): ಪಾಕ್‍ನ ಸೆರೆಯಲ್ಲಿರುವ ಭಾರತದ ಪೈಲೆಟ್ ಅಭಿನಂದನ್ ಸೆರೆಸಿಕ್ಕ ವೇಳೆ ಅವರ ಬಳಿಯಿದ್ದ ಭಾರತದ ಗೌಪ್ಯ ದಾಖಲೆಗಳನ್ನು ಜಗಿದು ನುಂಗಿದ್ದಾರೆಂದು ಪಾಕ್ ಪತ್ರಿಕೆ ವರದಿ ಮಾಡಿರುವುದು ತಿಳಿದು ಬಂದಿದೆ.

ಭಾರತದ ಯುದ್ಧ ವಿಮಾನ ಪತನಗೊಂಡ ವೇಳೆ ಪೈಲೆಟ್ ಅಭಿನಂದನ್ ಪಾಕ್ ಸೆರೆಯಲ್ಲಿ ಸಿಕ್ಕಾಗ ನಾನ್ನೆಲ್ಲಿದ್ದೇನೆಂದು ಕೇಳಿದಕ್ಕೆ, ಅಲ್ಲಿನ ಕೆಲವರು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿ ಅವರ ಮೇಲೆ ಹಲೆನಡೆಸಿದ್ದರು.

ಈ ವೇಳೆ ತಕ್ಷಣ ಅಭಿನಂದನ್ ಅವರು ಬಂದೂಕು ತೆಗೆದು ಗಾಳಿಯಲ್ಲಿ ಗುಂಡು ಹಾರಿಸಿ ಸ್ವಲ್ಪ ದೂರ ಓಡಿ ಕೊಳದಲ್ಲಿ ಬಚ್ಚಿಟ್ಟುಕೊಂಡು ಅವರ ಬಳಿಯಿದ್ದ ಗೌಪ್ಯ ದಾಖಲೆಗಳನ್ನು ನೀರಿಗೆ ಹಾಕಿ, ಇನ್ನು ಕೆಲವು ದಾಖಲೆಯನ್ನು ಜಗಿದು ನುಂಗಿದ್ದಾರೆಂದು ಡಾನ್ ಪತ್ರಿಕೆ ವರದಿ ಮಾಡಿದೆ.

ಇನ್ನು ಪಾಕ್ ಸೆರೆಯಲ್ಲಿರುವ ಅಭಿನಂದನ್‍ಗೆ ಪಾಕ್ ಸೇನೆ ಕೇಳಿದ ಪ್ರಶ್ನೆಗೆ ಹೆದರದೆ ದಿಟ್ಟೆದೆಯಿಂದ ಉತ್ತರ ಕೊಡುವುದರ ಮೂಲಕ ಗೌಪ್ಯ ಮಾಹಿತಿಯನ್ನು ಹೊರಹಾಕಿಲ್ಲ.