ನವದೆಹಲಿ:(ಫೆ04): ಲೋಕಪಾಲ ಮಸೂದೆಯನ್ನು ಜಾರಿಗೆ ತರಬೇಕೆಂದು ಉಪವಾಸ ಸತ್ಯಗ್ರಹ ಮಾಡಿದ ಗಾಂಧಿವಾದಿ ಅಣ್ಣಾ ಹಜಾರೆ ತಮ್ಮಗೆ ನೀಡಿದ ಪದ್ಮಭೂಷಣ ಪ್ರಶಸ್ತಿಯನ್ನು ವಾಪಾಸ್ ನೀಡಲು ಮುಂದಾಗಿದ್ದಾರೆ.

“ಪ್ರಶಸ್ತಿಗಾಗಿ ನಾನು ಕೆಲಸ ಮಾಡಿಲ್ಲ, ದೇಶ ಹಾಗೂ ಸಮಾಜಕ್ಕಾಗಿ ಕೆಲಸ ಮಾಡಲು ಹೊರಟರೆ ನೀವು ಪದ್ಮಭೂಷಣ ಕೊಟ್ಟಿದ್ದೀರಿ, ನನ್ನ ಬೇಡಿಕೆಯನ್ನು ಈಡೇರಿಸದ ಮೇಲೆ ಪ್ರಶಸ್ತಿಯ ಅಗತ್ಯವಿಲ್ಲ, ದೇಶದ ಸಮಸ್ಯೆಯಲ್ಲಿರುವಾಗ ಈ ಪ್ರಶಸ್ತಿ ನನಗೆ ಬೇಡ ಅದನ್ನು ರಾಷ್ಟ್ರಪತಿಗಳಿಗೆ ವಾಪಾಸ್ ನೀಡುತ್ತೇನೆ ಎಂದಿದ್ದಾರೆ.

ಸಮಾಜದ ಹಿತವನ್ನು ಬಯಸುವುದರ ಜೊತೆಗೆ ದೇಶದ ಜನ ಸಂಕಷ್ಟದ ಸ್ಥಿತಿಯಲ್ಲಿರುವಾಗ ಪ್ರಶಸ್ತಿಯ ಅಗತ್ಯವಿಲ್ಲವೆಂದು ಈಗ ಗಾಂಧಿವಾದಿ ಅಣ್ಣಾ ಹಜಾರೆ ಹೇಳಿದ್ದಾರೆ.