ಇಸ್ಲಾಮಬಾದ್:(ಫೆ28): ಪಾಕ್ ಸೆರೆಯಲ್ಲಿರುವ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ನಾಳೆ ಬಿಡುಗಡೆ ಮಾಡುವುದಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸಂಸತ್‍ನಲ್ಲಿ ಘೋಷಣೆ ಮಾಡಿದ್ದಾರೆ.

ಕಾಶ್ಮೀರದಲ್ಲಿ ಉಗ್ರರು ನಡೆಸಿದ ಪುಲ್ವಾಮ ದಾಳಿಯ ಪ್ರತಿಕಾರವಾಗಿ ಭಾರತೀಯ ಸೇನೆ ಪಾಕ್‍ನಲ್ಲಿರುವ ಜೈಶ್-ಎ-ಮೊಹಮ್ಮದ್ ಸಂಘಟನೆಯ ಉಗ್ರರ ನೆಲೆಗಳನ್ನು ನಾಶ ಮಾಡಿದ್ದು, ಇದಕ್ಕೆ ಪ್ರತಿಯಾಗಿ ಪಾಕ್‍ನ ಯುದ್ಧ ವಿಮಾನಗಳು ಗಡಿ ಉಲ್ಲಂಘಿಸಿ ಭಾರತದೊಳಗೆ ನುಸುಳಿದ ವೇಳೆ ಭಾರತೀಯ ಸೇನೆ ಪಾಕ್‍ನ ಎಫ್-16 ಯುದ್ಧ ವಿಮಾನವನ್ನು ಧ್ವಂಸಗೊಳಿಸಿದ್ದು, ಇದೇ ವೇಳೆ ಭಾರತದ ಮಿಂಗ್-21 ಯುದ್ಧ ವಿಮಾನ ಪತನಗೊಂಡು ಪೈಲೆಟ್ ಅಭಿನಂದನ್ ಪಾಕ್ ಸೆರೆಸಿಕ್ಕಿದ್ದರು. ಈ ವೇಳೆ ಭಾರತ ಅಭಿನಂದನ್ ಅವರನ್ನು ಸುರಕ್ಷಿತವಾಗಿ ಕಳಿಸುವಂತೆ ಆಗ್ರಹಿಸಿತ್ತು.

ಇಂದು ಪಾಕ್ ಸಂಸತ್‍ನಲ್ಲಿ ನಾಳೆ ಭಾರತದ ಪೈಲೆಟ್ ಅಭಿನಂದನ್ ಅವರನ್ನು ಬಿಡುಗಡೆಗೊಳಿಸುವುದಾಗಿ ಘೋಷಿಸಿದ್ದಾರೆ. ದಿಟ್ಟೆದೆಯ ಧೀರ, ಭಾರತದ ಹೆಮ್ಮೆಯ ಪುತ್ರ ಅಭಿನಂದನ್ ನಾಳೆ ತವರಿಗೆ ಬರುತ್ತಿದ್ದಾರೆ.