ಬೆಂಗಳೂರು(ಫೆ:08):ಯಡಿಯೂರಪ್ಪನವರು ಮಧ್ಯರಾತ್ರಿ ದೇವದುರ್ಗಕ್ಕೆ ಹೋಗಿ ಆಪರೇಷನ್ ನಡೆಸಲು ಹೋಗಿದ್ದಾರೆ ವಿನಹ ಯಾವ ಪೂಜಾ ಪುನಸ್ಕಾರಗಳಿಗೆ ಅಲ್ಲ.ಅದಕ್ಕೆ ನಮ್ಮ ಬಳಿ ಪುರಾವೆಗಳಿವೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಇಂದು ಬೆಳಿಗ್ಗೆ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಾರೆ.ಇವರ ಜೊತೆ ಮಾಧ್ಯಮ ದ ಮಿತ್ರರೊಬ್ಬರು ಭಾಗವಹಿಸಿದ್ದು ಪತ್ರಿಕಾ ಲೋಕದ ದುರಂತ ಎಂದಿದ್ದಾರೆ.ಯಡಿಯೂರಪ್ಪ ನವರು ಮಾತನಾಡಿದ ಧಾಖಲೆಯನ್ನು ಮಾಧ್ಯಮ ದ ಮುಂದೆ ತೆರೆದಿಡುತ್ತೇನೆ ಎಂದಿದ್ದಾರೆ.ಇದನ್ನು ದೇಶದ ಪ್ರಧಾನಿ ಗಂಭೀರವಾಗಿ ಪರಿಗಣಿಸಬೇಕು ಎಂದಿದ್ದಾರೆ. ಈ ಉದ್ಧಟ ತನ ಒಳ್ಳೆಯದಲ್ಲ ಎಂದಿದ್ದಾರೆ.