ಇಂದು ವಿಶ್ವ ರಕ್ತದಾನ ದಿನಾಚರಣೆ, ಯಾವುದೇ ವ್ಯಕ್ತಿಯು ಇನ್ನೊಬ್ಬರ ಜೀವ ಉಳಿಸಲು ತನ್ನ ರಕ್ತವನ್ನು ಸ್ವಯಂ ಪ್ರೇರಿತನಾಗಿ ಯಾವುದೇ ಪ್ರತಿಫಲವಿಲ್ಲದೆ ನೀಡುವುದೇ ರಕ್ತದಾನ.

ಅಂದ ಹಾಗೆ ಯಾರು ರಕ್ತದಾನ ಮಾಡಬೇಕು ಮತ್ತು ಯಾರು ಮಾಡಬಾರದು ಎಂಬುದರ ಡೀಟೇಲ್ಸ್ ಇಲ್ಲಿದೆ ನೋಡಿ,

ರಕ್ತದಾನ ಯಾರು ಮಾಡಬೇಕು:

1. ಹೆಣ್ಣು, ಗಂಡು ಭೇದವಿಲ್ಲದೆ 18 ರಿಂದ 60 ವರ್ಷದ ಒಳಗಿರುವ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು.
2. ಗಂಡಸರು 3 ತಿಂಗಳಿಗೊಮ್ಮೆ, ಹೆಂಗಸರು 4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು.
3. ರಕ್ತದಾನ ಮಾಡುವವರ ದೇಹದ ತೂಕ 45 ಕೆಜಿ ಗಿಂತ ಹೆಚ್ಚಿರಬೇಕು.
4. ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ 12.5 ಗ್ರಾಂ ಗಿಂತ ಹೆಚ್ಚಿರಬೇಕು.

ರಕ್ತದಾನ ಯಾರು ಮಾಡಬಾರದು.

1. ಅನಾರೋಗ್ಯದಿಂದ ಬಳಲುತ್ತಿದ್ದರೆ ರಕ್ತದಾನ ಮಾಡಬಾರದು.
2. ಮದ್ಯಪಾನ ಮತ್ತು ಮಾದಕ ದ್ರವ್ಯ ಸೇವನೆ ಮಾಡಿದಾಗ ರಕ್ತದಾನ ಮಾಡಬಾರದು.
3. ಆಸ್ಪರಿನ್ ಸೇವಿಸಿದ್ದರೆ, ಅಂತಹಾ ವ್ಯಕ್ತಿ ಮಾತ್ರೆ ಸೇವಿಸಿದ ನಂತರ 3 ದಿನ ರಕ್ತದಾನ ಮಾಡಬಾರದು.
4. ಹೆಚ್ ಐ ವಿ ಹಾಗೂ ಲೈಂಗಿಕ ರೋಗವಿರುವವರು ರಕ್ತದಾನ ಮಾಡಬಾರದು.

ರಕ್ತದಾನ ಮಾಡುವುದರಿಂದ ದಾನಿಗಳಿಗಾಗುವ ಪ್ರಯೋಜನಗಳೇನೆಂದರೆ, ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ, ದೇಹದಲ್ಲಿ ಹೊಸ ರಕ್ತ ಚಾಲನೆಯಿಂದ ಕಾರ್ಯತತ್ಪರತೆ ಮತ್ತು ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ. ರಕ್ತದಾನದಿಂದ ರಕ್ತದಲ್ಲಿದ್ದ ಕೊಬ್ಬಿನಾಂಶ ಕಡಿಮೆಯಾಗುತ್ತದೆ, ಅಷ್ಟೇ ಅಲ್ಲ ಹೃದಯಾಘಾತವನ್ನು ಶೇ. 80 ರಷ್ಟು ತಡೆಯಲು ಹಾಗೂ ರಕ್ತದ ಒತ್ತಡ ಮತ್ತು ಇನ್ನಿತರೆ ರೋಗಗಳನ್ನು ತಡೆಯಲು ಸಹಾಯವಾಗುತ್ತದೆ.