ಲಂಡನ್(ಫೆ:01): ಮದ್ಯದ ದೊರೆ ವಿಜಯ್ ಮಲ್ಯ ಸಾವಿರಾರು ಕೋಟಿ ರೂ. ಸಾಲದಿಂದ ದೇಶ ಬಿಟ್ಟು ಹೋಗಿದ್ದು,ಇದೀಗ ಟ್ವೀಟ್ ಮಾಡುವ ಮೂಲಕ ನ್ಯಾಯ ಎಲ್ಲಿದೆ? ಎಂದು ಪ್ರಶ್ನಿಸಿದ್ದಾರೆ.

ಜಪ್ತಿಯಾಗಿರುವ ತಮ್ಮ ಆಸ್ತಿಯ ಮೊತ್ತ 13,000 ಕೋಟಿ ರೂಪಾಯಿ,ಆದರೆ ತಾನು ಬಾಕಿ ಉಳಿಸಿಕೊಂಡಿರುವ ಸಾಲದ ಮೊತ್ತ ಕೇವಲ 9,000 ಕೋಟಿ ರೂ. ನನ್ನೆಲ್ಲಾ ಆಸ್ತಿಯನ್ನು ಜಪ್ತಿ ಮಾಡಿರುವ ಉದ್ದೇಶವೇನು? ಎಂದು ಪ್ರಶ್ನಿಸಿದ್ದಾರೆ.

ಭಾರತದಲ್ಲಿನ ಎಲ್ಲಾ ಆಸ್ತಿಯನ್ನು ವಶಕ್ಕೆ ಪಡೆದ ಹೊರತಾಗಿಯೂ ಬ್ಯಾಂಕ್ ಗಳು ಯುಕೆಯಲ್ಲಿರುವ ವಕೀಲರಿಗೆ ನನ್ನ ವಿರುದ್ಧ ವಿಚಾರಣೆಗೆ ಸಂಪೂರ್ಣ ಪರವಾನಗಿ ನೀಡಿದ್ದಾರೆ. ಅವರು ನನ್ನ ವಿರುದ್ಧವಾಗಿ ಅನೇಕ ಅಪ್ರಾಮಾಣಿಕ ವಿಚಾರಣೆ ನಡೆಸುತ್ತಿದ್ದಾರೆ ಎಂದು ಮಲ್ಯ ದೂರಿದ್ದಾರೆ.