ಬೆಂಗಳೂರು(ಜೂನ್.12) ಐಎಂಎ ಕಂಪನಿಯ ಮಾಲೀಕ ಮನ್ಸೂರ್ ಅಲಿಖಾನ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಬೆಂಗಳೂರಿನಲ್ಲಿ 13 ಸಾವಿರಕ್ಕೂ ಅಧಿಕ ದೂರುಗಳು ದಾಖಲಾಗಿವೆ. ಕೇಸ್ ಸಂಬಂಧ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿಯೂ ದೂರುಗಳು ದಾಖಲಾಗಿವೆ.

ಈ ಹಿನ್ನೆಲೆಯಲ್ಲಿ ಕಣ್ಣೀರು ಹಾಕುತ್ತಿರುವ ಗ್ರಾಹಕರ ನೆರವಿಗೆ ಜಮೀರ್ ಅಹ್ಮದ್, ಮನ್ಸೂರ್ ಖಾನ್ ಗೆ ಟ್ವಿಟ್ಟರ್ ನಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಮನ್ಸೂರ್ ಅವರೇ ಎಲ್ಲಿದ್ದೀರಾ ಬನ್ನಿ, ನಿಮ್ಮ ಜೊತೆ ನಾವಿದ್ದೇವೆ. ನಮ್ಮ ಸರ್ಕಾರ ನಿಮಗೆ ಭದ್ರತೆಯನ್ನು ಕೊಡಲಿದೆ. ಬಡವರ ಹಣವನ್ನು ಬಡವರಿಗೆ ಹಿಂತಿರುಗಿಸಿ ಪುಣ್ಯ ಕಟ್ಟಿಕೊಳ್ಳಿ ಯಾವ ಅಧಿಕಾರಿಗಳಿಗೆ, ಯಾವ ರಾಜಕಾರಣಿಗಳಿಗೆ ಹಣ ಕೊಟ್ಟಿದ್ದೀರಿ ಧೈರ್ಯವಾಗಿ ಬಂದು ಪೊಲೀಸರ ಮುಂದೆ ಎಲ್ಲವನ್ನೂ ಹೇಳಿಕೊಳ್ಳಿ. ಎಲ್ಲರಿಂದಲೂ ನೀವು ಕೊಟ್ಟಿರೋ ಹಣವನ್ನು ವಾಪಸ್ ಪಡೆಯೋಣ. ಎಂದಿದ್ದಾರೆ.