ಲಕ್ನೋ(ಫೆ,12): ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರು ಭಾಷಣ ಮಾಡುವಾಗ ಅವರ ಕೈ ಮತ್ತು ದೇಹ ಸನ್ನೆಯನ್ನು ಅಣುಕಿಸಿದ್ದಾರೆ.

ಲೋಕಸಭಾ ಚುನಾವಣೆಗೆ ಕೆಲವು ದಿನಗಳು ಮಾತ್ರ ಬಾಕಿ ಇದ್ದು ಕಳೆದ ತಿಂಗಳು ರಾಜಕಾರಣಕ್ಕೆ ಸೇರ್ಪಡೆಯಾದ ಪ್ರಿಯಾಂಕ ಗಾಂಧಿ ಉತ್ತರ ಪ್ರದೇಶದ ಲಕ್ನೋದಲ್ಲಿ ಚುನಾವಣಾ ಪ್ರಚಾರ ರ್ಯಾಲಿಯನ್ನು ಹಮ್ಮಿಕೊಂಡಿದ್ದಾರೆ. ಇನ್ನು ಪ್ರಿಯಾಂಕಗೆ ರಾಹುಲ್ ಗಾಂಧಿ, ಉತ್ತರ ಪ್ರದೇಶದ ಪಶ್ಚಿಮ ಭಾಗದ ಕಾರ್ಯದರ್ಶಿ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಜ್ ಬಬ್ಬರ್ ಸಾಥ್ ನೀಡಿದ್ದಾರೆ.

ಸಹೋದರಿ ಪ್ರಿಯಾಂಕ ಗಾಂಧಿಯ ಜೊತೆಗೂಡಿ ಲಕ್ನೋದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾದ ರಾಹುಲ್, ಮೋದಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನರೇಂದ್ರ ಮೋದಿ ಇತ್ತೀಚೆಗೆ ಈ ರೀತಿ ಮಾತನಾಡುತ್ತಾರೆ ಎಂದು ಮೋದಿಯ ಭಾಷಣ ಮಾಡುವಾಗ ಅವರ ಕೈ ಮತ್ತು ದೇಹದ ಶೈಲಿಯನ್ನು ರಾಹುಲ್ ವೇದಿಕೆಯ ಮೇಲೆ ಅನುಕರಣೆ ಮಾಡಿದರು. ರಾಹುಲ್ ಅಭಿನಯಕ್ಕೆ ಅಲ್ಲಿ ನೆರೆದಿದ್ದ ಜನ ಜೋರಾಗಿ ಕೊಗಿ ಹರ್ಷ ವ್ಯಕ್ತಪಡಿಸಿದರು.

ಅನಿಲ್ ಅಂಬಾನಿಯಾರೆಂಬುದು ನನಗೆ ಗೊತ್ತಿಲ್ಲ. ನಾನು ಅನಿಲ್ ಅಂಬಾನಿಗೆ 20,000 ಕೋಟಿ ನೀಡಲಿಲ್ಲ ಎಂದು ರಾಹುಲ್ ಕ್ಷಮೆಯಾಚಿಸುವ ಮೂಲಕ ಪರೋಕ್ಷವಾಗಿ ಮೋದಿ ಗೆ ಟಾಂಗ್ ನೀಡಿದ ರಾಹುಲ್, ಮೋದಿ ಸರಕಾರ ಅನಿಲ್ ಅಂಬಾನಿಯನ್ನು ಬೆಂಬಲಿಸುತ್ತಿದೆ ಎಂದು ಹೇಳಿದರು.

ರಫೇಲ್ ಜೆಟ್ ಗಳನ್ನು ಖರೀದಿಸಲು ಫ್ರಾನ್ಸ್ ನೊಂದಿಗೆ ಮಾಡಿಕೊಂಡ ಒಪ್ಪಂದದಲ್ಲಿ ಮೋದಿ ಮತ್ತು ಅವರ ಸರ್ಕಾರ ಭಾರೀ ಪ್ರಮಾಣ ದಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ರಾಹುಲ್ ಆರೋಪಿಸಿದರು.

2019 ರ ಲೋಕಸಭೆ ಚುನಾವಣೆಗೆ ಭಾರೀ ತಯಾರಿಯಲ್ಲಿರುವ ಪ್ರಿಯಾಂಕ ಉತ್ತರ ಪ್ರದೇಶದ ಲಕ್ನೋದಲ್ಲಿ ಚುನಾವಣಾ ಪ್ರಚಾರವನ್ನು ನಡೆಸುವ ಮೂಲಕ ದೊಡ್ಡ ಪ್ರಮಾಣದಲ್ಲಿ ಜನತೆಯನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ರಾಹುಲ್ ಗಾಂಧಿ ಮೋದಿಯ ಭಾಷಣ ಶೈಲಿಯನ್ನು ಅಣುಕಿಸಿರುವುದು ಇದು ಮೊದಲ ಬಾರಿಯಾಲ್ಲ ಹಿಂದೆ ನಡೆದ ರಾಜಕೀಯ ಸಮಾವೇಶಗಳಲ್ಲಿ ಅವರನ್ನು ಅನುಕರಿಸಿದ್ದಾರೆ.