ಬೆಂಗಳೂರು(ಫೆ:೦೮):ರಮೇಶ್ ಜಾರಕಿಹೊಳಿ ನನ್ನ ಗೆಲುವಿಗೆ ಕಾರಣ.ಹಾಗಾಗಿ ಅವರು ಹೇಳಿದರೆ ರಾಜೀನಾಮೆ ನೀಡಲು ಸಿದ್ದ ಎಂದು ಅಥಣಿ ಶಾಸಕರಾದ ಮಹೇಶ್ ಕುಮಟಳ್ಳಿ ತಿಳಿಸಿದ್ದಾರೆ.
ನನ್ನ ಕ್ಷೇತ್ರದ ಬಹುತೇಕ ಪ್ರದೇಶ ಗಳಲ್ಲಿ ರಮೇಶ್ ಜಾರಕಿ ಹೋಳಿ ಮಾತು ನಡೆಯುತ್ತದೆ.ಅವರೇ ನನ್ನ ಗೆಲುವಿಗೆ ಕಾರಣ.ಅವರು ಹೇಳಿದರೆ ರಾಜೀನಾಮೆ ನೀಡಲು ಸಿದ್ದ ಎಂದಿದ್ದಾರೆ.

ನನ್ನ ಹಣೆಬರೆಹದಲ್ಲಿ 8 ತಿಂಗಳಲ್ಲಿ ಶಾಸಕನಾಗಿರುವದೇ ಇದ್ದರೆ ಹಾಗೆ ಆಗಲಿ.ನನಗೆ ಮಂತ್ರಿ ಆಗುವ ಆಸೆಯಿಲ್ಲ ಎಂದಿದ್ದಾರೆ.

ಅಥಣಿ ಕ್ಷೇತ್ರದಿಂದ ದಿಂದ ಕಾಂಗ್ರೆಸ್ ಪಕ್ಷದಿಂದ ಮೊದಲ ಬಾರಿ ಆಯ್ಕೆ ಆಗಿರುವ ಮಹೇಶ್ ರವರನ್ನು ಅನರ್ಹಗೊಳಿಸುವಂತೆ ಇಂದು ಸಿದ್ದರಾಮಯ್ಯ ರವರು ಸ್ಪೀಕರ್ ಗೆ ಶಿಫಾರಸು ಮಾಡಿದ್ದಾರೆ