ಕೇಂದ್ರಪಾದ(ಜ:12): ಒಡಿಸ್ಸಾ ದ ಕೇಂದ್ರಪಾದ ಜಿಲ್ಲೆಯ ಸಮುದ್ರ ತೀರದಲ್ಲಿ 40 ಅಡಿ ಉದ್ದದ ಭಾರೀ ತಿಮಿಂಗಲವೊಂದರ ಮೃತದೇಹ ಪತ್ತೆಯಾಗಿದೆ. ಈ ತಿಮಿಂಗಲ 12 ಟನ್ನುಗಳಷ್ಟು ತೂಕ ಹೊಂದಿದೆ ಎಂದು ಅರಣ್ಯಾಧಿಕಾರಿ ಸುಬ್ರತ್ ಪಾತ್ರ ತಿಳಿಸಿದ್ದಾರೆ.

ತಲ್ಚುವಾ ಕರಾವಳಿ ತೀರದಲ್ಲಿ ಬಿದ್ದಿರುವ ಈ ತಿಮಿಂಗಲದ ಮೃತದೇಹ ತೆರವುಗೊಳಿಸಲು ಸಿಬ್ಬಂಧಿಗಳು ಹರಸಾಹಸ ಪಡುತ್ತಿದ್ದಾರೆ,ಇದಕ್ಕಾಗಿ ಉತ್ತಮ ಸಾಮರ್ಥ್ಯ ಹೊಂದಿರುವ ಕ್ರೇನ್ ಹಾಗೂ ಇತರೆ ಸಾಧನಗಳನ್ನು ಬಳಸಲಾಗಿದೆ.