ನವದೆಹಲಿ(ಮಾ,16): ದೇಶಕ್ಕೆ ಮಹಾತ್ಮಾ ಗಾಂಧಿ, ಮಾರ್ಟಿನ್ ಲೂಥರ್ ಕಿಂಗ್ ಅತಂಹ ನಾಯಕರು ಬೇಕು. ಹಿಟ್ಲರ್, ಮುಸ್ಲೋನಿ, ಅವರಂತ ಮೋದಿಗಳಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದಾರೆ.

ನ್ಯೂಜಿಲ್ಯಾಂಡ್‍ನಲ್ಲಿ ನಡೆದ ಮಸೀದಿ ದಾಳಿಯನ್ನು ಖಂಡಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಉಗ್ರರು ನಡೆಸಿದ ಅಮಾನವೀಯ ಕೃತ್ಯ ಖಂಡನೀಯವಾಗಿದೆ. ಭಯೋತ್ಪಾದನೆಯನ್ನು ದ್ವೇಷಿಸಬೇಕೇ ಹೊತು ಧರ್ಮವನಲ್ಲ. ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸಂತಾಪ ತಿಳಿಸುತ್ತಿರುವೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಇದನ್ನು ರೀ ಟ್ವೀಟ್ ಮಾಡಿದ ದಿಗ್ವಜಯ್ ಸಿಂಗ್ ರಾಹುಲ್ ಜೀ ಅವರ ಮಾತನ್ನು ನಾನು ಒಪ್ಪಿಕೊಳ್ಳುತ್ತೇನೆ. ಜಗತ್ತು ಪ್ರೀತಿ, ಶಾಂತಿಯ ಸಿದ್ಧಾಂತವನ್ನು ಬಯಸುತ್ತದೆ. ಹೀಗಾಗಿ ಮಹಾವೀರ್ ಹಾಗೂ ಗೌತಮ ಬುದ್ಧನ ಶಾಂತಿ ಹಾಗೂ ಸಹಬಾಳ್ವೆಯನ್ನು ಜನರಿಗೆ ನೀಡಲು ಯತ್ನಿಸಬೇಕೇ ಹೊರತು ದ್ವೇಷ, ಯುದ್ಧಗಳನ್ನಲ್ಲ ಎಂದು ದಿಗ್ವಜಯ್ ಸಿಂಗ್ ತಿಳಿಸಿದ್ದಾರೆ.