ಕಲ್ಲಂಗಡಿ ಹಣ್ಣು ತಿನ್ನುವುದರಿಂದ ದೇಹವನ್ನು ತಂಪಾಗಿಸುವುದರ ಜೊತೆಗೆ ದೇಹದಲ್ಲಾಗುವ ಉರಿಯನ್ನು ಕಡಿಮೆ ಮಾಡುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ರಕ್ತದೊತ್ತಡ ನಿಯಂತ್ರಣ ಮಾಡುವಲ್ಲಿ ಸಹಕಾರಿಯಾಗಿದೆ.

ಅಸ್ತಮಾ ರೋಗಿಗಳು ಈ ಹಣ್ಣನ್ನು ತಿನ್ನುವುದರಿಂದ ಹೆಚ್ಚು ಅನುಕೂಲವಾಗುತ್ತದೆ. ಹಾಗೂ ದೇಹದ ತೂಕವನ್ನು ಇಳಿಸುವುದರ ಮೂಲಕ ಮೂಳೆ, ಸ್ನಾಯುವನ್ನು ಗಟ್ಟಿಗೊಳಿಸುತ್ತದೆ.

ಈ ಹಣ್ಣಿನಲ್ಲಿ ಹೆಚ್ಚು ನೀರಿರುವುದರಿಂದ ಜೀರ್ಣ ಶಕ್ತಿಯನ್ನು ಹೆಚ್ಚಿಸುವುದರ ಮೂಲಕ ಮಾನಸಿಕ ಸ್ಥಿತಿಯನ್ನು ಉತ್ತಮವಾಗಿಡುತ್ತದೆ.