ಕಲ್ಲುಸಕ್ಕರೆಯಲ್ಲಿ ಅಪಾರ ಪ್ರಮಾಣದ ವಿಟಮಿನ್, ಖನಿಜಗಳನ್ನು ಒಳಗೊಂಡಿದ್ದು, ಆರೋಗ್ಯಕ್ಕೆ ಪೂರಕವಾಗಿದೆ. ಮಾಂಸಹಾರದಲ್ಲಿ ಮಾತ್ರ ಕಂಡು ಬರುವ ವಿಟಮಿನ್ ಬಿ12 ಕಲ್ಲುಸಕ್ಕರೆಯಲ್ಲಿದೆ.

ಊಟದ ಬಳಿಕ ಕಲ್ಲುಸಕ್ಕರೆ ಸೇವಿಸುವುದರಿಂದ ಬ್ಯಾಕ್ಟೀರಿಯವನ್ನು ಕೊಲ್ಲುತ್ತದೆ. ಗಂಟಲು ಬೇನೆಗೆ ಕಲ್ಲುಸಕ್ಕರೆ ತಿನ್ನುವುದರಿಂದ ಕಡಿಮೆಯಾಗುತ್ತದೆ.

ಕಲ್ಲುಸಕ್ಕರೆಯಲ್ಲಿ ಹೆಚ್ಚಿನ ಪೋಷಕಾಂಶವಿರುವುದರಿಂದ ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಜೀರಿಗೆಯೊಂದಿಗೆ ಇದನ್ನು ಸೇವಿಸುವುದರಿಂದ ಜೀರ್ಣಶಕ್ತಿಗೆ ನೆರವಾಗುತ್ತದೆ.

ಮೂಗಿನಲ್ಲಿ ರಕ್ತಸುರಿಯುತ್ತಿದ್ದರೆ ಒಂದು ಲೋಟ ನೀರಿಗೆ ಕಲ್ಲುಸಕ್ಕರೆ ಬೆರಸಿ ಕುಡಿಯುವುದರಿಂದ ಕಡಿಮೆಯಾಗುತ್ತದೆ. ಕೆಮ್ಮಿಗೂ ಇದು ರಾಮಭಾಣವಾಗಿ ಕೆಲಸ ಮಾಡುತ್ತದೆ. ಹೀಗೆ ಅನೇಕ ಕಾಯಿಲೆಗೆ ಔಷಧಿಯಾಗಿ ಕಲ್ಲುಸಕ್ಕರೆ ಬಳಸ ಬಹುದು.