ಬೆಂಗಳೂರು(ಜೂನ್.06) ಕಳೆದ ದಿನ ಜೂನ್.04ರಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ರವರು ತಮ್ಮ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ವಿಶ್ವನಾಥ್ ಅಧ್ಯಕ್ಷರಾಗಿಯೇ ಮುಂದುವರೆಯುತ್ತಾರೆ ಎಂದು ಜೆಡಿಎಸ್ ಪ್ರಚಾರ ಸಮಿತಿಯ ನಾಯಕರಾದ ವೈ.ಎಸ್.ವಿ ದತ್ತಾರವರು ತಿಳಿಸಿದ್ದಾರೆ.
ನಂತರದಲ್ಲಿ ಮಾತನಾಡಿದ ಅವರು ವಿಶ್ವನಾಥ್ ರವರ ಅವಶ್ಯಕತೆ ನಮ್ಮ ಪಕ್ಷಕ್ಕೆ ಬೇಕಾಗಿದೆ. ಇನ್ನು ವಿಶ್ವನಾಥ್ ರವರ ರಾಜೀನಾಮೆಯು ಅಂಗೀಕಾರವಾಗಿಲ್ಲ.

ಹೆಚ್.ಡಿ.ದೇವೇಗೌಡರು ಹೆಚ್.ವಿಶ್ವನಾಥ್ ರವರ ಮನವೊಲಿಸಲಿದ್ದಾರೆ. ವಿಶ್ವನಾಥ್ ರವರ ನಾಯಕತ್ವ ನಮ್ಮಂತಹ ನೂರಾರು ಕಾರ್ಯಕರ್ತರಿಗೆ ಪ್ರೇರಣೆ. ಕಾರ್ಯಕರ್ತರಿಗೆ ವಿಶ್ವನಾಥ್ ರವರ ಮಾರ್ಗದರ್ಶನ ಬೇಕು. ವಿಶ್ವನಾಥ್ ರವರು ಅಧ್ಯಕ್ಷರಾಗಿಯೇ ಮುಂದುವರಿಯಲಿದ್ದಾರೆ ಎಂದು ವಿಧಾನಸೌದದಲ್ಲಿ ವೈ.ಎಸ್.ವಿ.ದತ್ತಾರವರು ನುಡಿದಿದ್ದಾರೆ.