ಬೆಂಗಳೂರು(ಅ.೧೪) ಅಭಿವೃದ್ಧಿ ದೃಷ್ಟಿಯಿಂದ ಮೈಸೂರು ಜಿಲ್ಲೆಯನ್ನು ವಿಭಜನೆ ಮಾಡಬೇಕು ಎಂದು ಸರ್ಕಾರಕ್ಕೆ ಮಾಜಿ ಸಚಿವ,ಅನರ್ಹ ಶಾಸಕ ವಿಶ್ವನಾಥ್ ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪರವರನ್ನು ಭೇಟಿ ಮಾಡಿ ಹೊಸ ಜಿಲ್ಲೆಯ ರಚನೆಗೆ ಮನವಿ ಮಾಡಿದ್ದಾರೆ. ಹುಣಸೂರು ಉಪವಿಭಾಗವನ್ನು ಪ್ರಮುಖವಾಗಿಸಿಕೊಂಡು ದೇವರಾಜ ಅರಸು ಹೆಸರಿನಲ್ಲಿ ಹೊಸ ಜಿಲ್ಲೆ ರಚನೆ ಆಗಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.ಹುಣಸೂರು ಕ್ಷೇತ್ರದಿಂದ ಆಯ್ಕೆಯಾಗಿದ್ದ ವಿಶ್ವನಾಥ್ ಇತ್ತೀಚೆಗೆ ಅನರ್ಹರಾಗಿದ್ದರು.

ಹುಣಸೂರು ದೇವರಾಜ ಅರಸು ಪ್ರತಿನೀಡಿಸುತ್ತಿದ್ದ ಕ್ಷೇತ್ರ,ಈ ಕ್ಷೇತ್ರವನ್ನು ಒಳಗೊಂಡು ಆರು ತಾಲೂಕು ಗಳನ್ನು ಸೇರಿಸಿ ಹೊಸ ಜಿಲ್ಲೆ ಮಾಡಬೇಕು ಎಂದಿದ್ದಾರೆ.
ಇತ್ತೀಚೆಗಷ್ಟೇ ಬಳ್ಳಾರಿ ಜಿಲ್ಲೆಯ ವಿಭಜನೆ ಮಖ್ಯಮಂತ್ರಿಗಳಿಗೆ ಕಗ್ಗಂಟಾಗಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.ಅದೇ ಸಂದರ್ಭದಲ್ಲಿ ಮತ್ತೆ ಮೈಸೂರನ್ನು ವಿಭಜಿಸಿ ಹೊಸ ಜಿಲ್ಲೆಗೆ ಬೇಡಿಕೆ ಇಟ್ಟಿರುವುದು ಮತ್ತೊಂದು ಹೊಸ ವಿವಾದವನ್ನು ಹುಟ್ಟು ಹಾಕಿದೆ.