ಬೆಂಗಳೂರು:(ಮಾ04): ಸ್ಯಾಂಡಲ್‍ವುಡ್‍ನಲ್ಲಿ ವಿರುಪಾ ಚಿತ್ರ ಬಿಡುಗಡೆಗೆ ರೆಡಿಯಾಗಿ ನಿಂತಿದೆ. ಈ ಚಿತ್ರದಲ್ಲಿ ವಿಶೇಷ ಚೇತನ ಮಕ್ಕಳು ನಟಿಸಿದ್ದಾರೆ. ಈ ಚಿತ್ರವನ್ನು ಉದ್ಯಮಿ ಡ್ಯಾಪ್ನಿ ನೀತು ಡಿಸೋಜ ನಿರ್ಮಾಣ ಮಾಡಿದ್ದು, ಪುನೀಕ್ ಶೆಟ್ಟಿ ನಿರ್ದೇಶಿಸಿದ್ದಾರೆ.

ಹಂಪಿಯಲ್ಲಿ ಚಿತ್ರದ ಚಿತ್ರೀಕರಣ ನಡೆಸಿದ್ದು, ಹಂಪಿಯ ಸುಂದರ ದೃಶ್ಯವನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಇನ್ನು ಸಿನಿಮಾದಲ್ಲಿ ಮಕ್ಕಳನ್ನೆ ಕೇಂದ್ರಿಕರಿಸಲಾಗಿದ್ದು, ವಿಶೇಷ ಚೇತನರಾಗಿರುವ ಇಬ್ಬರು ಮಕ್ಕಳು ಈ ಚಿತ್ರದಲ್ಲಿ ನಟಿಸಿದ್ದಾರೆ. ಒಂದು ಮಗುವಿಗೆ ಮಾತು ಬರುವುದಿಲ್ಲ, ಇನ್ನೊಂದು ಮಗುವಿಗೆ ಕಣ್ಣು ಕಾಣಿಸುವುದಿಲ್ಲವಾದರು ದೈರ್ಯ ಆತ್ಮಸ್ಥೈರ್ಯದಿಂದ ಸಿನಿಮಾದಲ್ಲಿ ನಟಿಸಿದ್ದಾರೆ.

ಈ ಸಿನಿಮಾಗೆ ಅನಂತ್ ರಾಜ್ ಅರಸ್ ಛಾಯಾಗ್ರಹಣ ಮಾಡಿದ್ದು, ಮಹಾವೀರ್ ಸಬಣ್ಣವರ್ ಶಬ್ಧ ಹಾಗೂ ಅವಿನಾಶ್ ಕಾವೂರು ಚಿತ್ರಕ್ಕೆ ಸಂಕಲನ ನೀಡಿದ್ದು, ಪ್ರದೀಪದ ಮಳ್ಳೂರುವ ಅವರ ಸಂಗೀತವಿದೆ. ಈಗಾಗಲೆ ಚಿತ್ರ ಸೆನ್ಸಾರ್ ಬೋರ್ಡ್‍ನಲ್ಲಿ ಯು ಸರ್ಟಿಫಿಕೇಟ್ ಪಡೆದುಕೊಂಡಿದ್ದು, ಡಿರ್ಫೆಂಟ್ ಕಥೆಯಿರುವ “ವಿರುಪಾ” ಚಿತ್ರ ಬಿಡುಗಡೆಗೆ ರೆಡಿಯಾಗಿ ನಿಂತಿದೆ.