ನವದೆಹಲಿ(ಜೂನ್.27) ಇಂದು ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗಲಿದ್ದು, ಇಂದಿನ ಪಂದ್ಯ ಹಲವು ದಾಖಲೆಗಳಿಗೆ ಹೆಸರಾಗಲಿದೆ.

ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ವೇಗದ 11 ಸಾವಿರ ರನ್ ಗಳನ್ನು ಪೂರೈಸಿದ್ದ ವಿರಾಟ್ ಕೊಹ್ಲಿ ಇದೀಗ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತಿ ವೇಗದ 20 ಸಾವಿರ ರನ್ ಗಳನ್ನು ಗಳಿಸಲು ಇನ್ನು ಕೇವಲ 37 ರನ್ ಗಳು ಮಾತ್ರ ಬಾಕಿ ಇವೆ. ಇಂದಿನ ಪಂದ್ಯದಲ್ಲಿ 20 ಸಾವಿರ ರನ್ ಗಳನ್ನು ಗಳಿಸುವುದರ ಮೂಲಕ ಮತ್ತೊಂದು ಐತಿಹಾಸಿಕ ದಾಖಲೆ ನಿರ್ಮಿಸಲಿದ್ದಾರೆ.

ಸಚಿನ್ ತೆಂಡೂಲ್ಕರ್ ಮತ್ತು ಬ್ರಿಯನ್ ಲಾರಾ ಇಲ್ಲಿಯವರೆಗು 20 ಸಾವಿರ ರನ್ ಗಳಿಸಿದವರ ಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿದ್ದಾರೆ. ಇವರಿಬ್ಬರು 453 ಇಂನ್ನಿಂಗ್ಸ್‍ಗಳಲ್ಲಿ 20 ಸಾವಿರ ರನ್ ಗಳನ್ನು ಗಳಿಸಿದ್ದಾರೆ. ಆದರೆ ವಿರಾಟ್ ಕೊಹ್ಲಿ ಕೇವಲ 416 ಇನ್ನಿಂಗ್ಸ್ ಗಳಲ್ಲಿ 20 ಸಾವಿರ ರನ್ ಗಳನ್ನು ಪೂರೈಸುವ ಮೂಲಕ ಮತ್ತೊಂದು ದಾಖಲೆ ನಿರ್ಮಿಸಲಿದ್ದಾರೆ.