ಬೀದರ್(ಜೂನ್.27) ಇಂದು ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಉಜಳಾಂಬ ಗ್ರಾಮಕ್ಕೆ ಸಿಎಂ ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಮತ್ತು ಜನತಾದರ್ಶನ ಕಾರ್ಯಕ್ರಮಕ್ಕೆ ಆಗಮಿಸಿದ ಅವರು ಜನತಾದರ್ಶನ ಕಾರ್ಯಕ್ರಮವನ್ನು ಟೀಕಿಸುವವರ ವಿರುದ್ಧ ಕಿಡಿಕಾರಿದರು.

ಗ್ರಾಮ ವಾಸ್ತವ್ಯ ಅಷ್ಟೊಂದು ಸುಲಭವಾದ ಮಾತಲ್ಲ, ಇಂತಹ ನಮ್ಮ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಟೀಕಿಸುವವರು ಗ್ರಾಮ ವಾಸ್ತವ್ಯವನ್ನು ಮಾಡಿ ತೊರಿಸಲಿ ಎಂದು ಬಿಜೆಪಿ ಪಕ್ಷದ ನಾಯಕರಿಗೆ ಪರೋಕ್ಷ ಸವಾಲು ಹಾಕಿದ್ದಾರೆ.

ಅಂದು ಮಹಾತ್ಮ ಗಾಂಧೀಜಿಯವರು ಗ್ರಾಮ ವಾಸ್ತವ್ಯವನ್ನು ಮಾಡಿದ್ದರು. ಇಂದು ಅವರ ಹಾದಿಯಲ್ಲಿಯೇ ಸಾಗಿ ಜನಸಾಮಾನ್ಯರ ರೈತರ ಕಷ್ಟಗಳನ್ನು ಕೇಳಿ ಅವರ ಕಷ್ಟಗಳಿಗೆ ಸ್ಪಂದಿಸುತ್ತಿದ್ದೇನೆ.

ಉಜಳಂಬ ಗ್ರಾಮದ ಅಭಿವೃದ್ಧಿಗಾಗಿ 32 ಕೋಟಿ ರೂ. ಅನುಧಾನವನ್ನು ನೀಡಲಿದ್ದೇನೆ ಎಂದರು. ಗೋದಾವರಿ ನದಿಯಿಂದ ಬೀದರ್ ಜಿಲ್ಲೆಗೆ ಕುಡಿಯುವ ನೀರನ್ನು ಒದಗಿಸುವ ಕುರಿತು ಚರ್ಚೆಯನ್ನು ಮಾಡುತ್ತಿದ್ದೇವೆ ಎಂದು ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ನುಡಿದರು.