ಬೆಂಗಳೂರು:( ಜ24): ವಿಜಯ ಬ್ಯಾಂಕ್ ಈ ಸಾರಿಯೂ ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಲಾಭವನ್ನು ಗಳಿಸಿದೆ. ಅಂದರೆ ಇಂದಿನ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ರೂ 143 ಕೋಟಿ ನಿವ್ವಳ ಲಾಭಗಳಿಸಿದೆ.

ಹಿಂದಿನ ವರ್ಷದ ಲಾಭಕ್ಕಿಂತ ಈ ವರ್ಷ ಲಾಭದ ಮಟ್ಟ ಹೆಚ್ಚಿದೆ. ಹಿಂದಿನ ವರ್ಷಕ್ಕಿಂತ ಹೆಚ್ಚು ಲಾಭ ಗಳಿಸಿದ್ದು ˌ ಈ ಬಾರಿ ಲಾಭದ ಪ್ರಮಾಣ ಶೇಕಡ 80 ರಷ್ಟು ಹೆಚ್ಚಾಗಿದೆಂದು ಬ್ಯಾಂಕ್ ನ ಸಿಇಒ ಆರ್.ಎ ಶಂಕರನಾರಾಯಣನ್ ಅವರು ತಿಳಿಸಿದ್ದಾರೆ.

ಒಟ್ಟಿನಲ್ಲಿ ವಿಜಯ ಬ್ಯಾಂಕ್ ವರಮಾನ ಹೆಚ್ಚಾಗಿದ್ದು ˌ ರೂ 3ˌ451 ಕೋಟಿಯಿಂದ ರೂ 4,106 ಕೋಟಿಗೆ ಹೆಚ್ಚಳವಾಗಿದೆ. ಇದು ಸಂತೋಷದ ಸಂಗತಿ.