ಮುಂಬೈ: ಬ್ಯಾಂಕ್‍ಗಳಲ್ಲಿ ಸಾವಿರಾರು ಕೋಟಿ ಸಾಲ ಮಾಡಿ ತಿರಿಸಲಾಗದೆ ದೇಶ ತೊರೆದಿರುವ ಮದ್ಯದ ದೊರೆ ವಿಜಯ್ ಮಲ್ಯರನ್ನು ಆರ್ಥಿಕ ದೇಶಭ್ರಷ್ಟ ಎಂದು ಮುಂಬೈನ ನ್ಯಾಯಾಲಯ ಘೋಷಿಸಿದೆ.

ವಿಜಯ್ ಮಲ್ಯ 2016ರಲ್ಲಿ ದೇಶ ತೊರೆದು ಇಂಗ್ಲೆಂಡ್‍ಗೆ ತೆರಳಿದ್ದರು. ನಂತರ ಸರ್ಕಾರ ವಿಜಯ್ ಮಲ್ಯರನ್ನು ಭಾರತದ ಸುಪರ್ದಿಗೆ ಹಸ್ತಾಂತರಿಸುವಂತೆ ಬ್ರಿಟನ್ ಸರ್ಕಾರಕ್ಕೆ ಮನವಿ ಮಾಡಿತ್ತು. ಬ್ರಿಟನ್ ನ್ಯಾಯಾಲಯದಲ್ಲಿ ಸುಮಾರು ವರ್ಷಕ್ಕೂ ಹೆಚ್ಚು ಕಾಲ ವಾದ ಪ್ರತಿವಾದದ ನಂತರ 2018ರ ಡಿಸೆಂಬರ್ 10ರಂದು ಭಾರತಕ್ಕೆ ಮಲ್ಯರನ್ನು ಹಸ್ತಾಂತರಿಸಲು ಆದೇಶಿಸಿತ್ತು.

ದೇಶದ ಹಲವು ಖಾಸಗಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ರೂ. 9,000 ಕೋಟಿಗಿಂತ ಹೆಚ್ಚು ಸಾಲ ಮಾಡಿ ಮರುಪಾವತಿ ಮಾಡದ ಆರೋಪ ಎದುರಿಸುತ್ತಿದ್ದರು.