ಹೈದ್ರಾಬಾದ್(ಏ:02): ಬಹು ಭಾಷಾ ಸಿನಿಮಾ ಡಿಯರ್ ಕಾಮ್ರೇಡ್’ ಚಿತ್ರದಲ್ಲಿ ಲಿಪ್ ಲಾಕ್ ಸೀನ್ ಬಗ್ಗೆ ರಶ್ಮಿಕಾ ಮಂದಣ್ಣ ಅವರನ್ನು ಗುರಿಯಾಗಿರಿಸಿಕೊಂಡು ಮಾಡುತ್ತಿರುವ ಕಾಮೆಂಟ್ ಗಳಿಗೆ ನಟ ವಿಜಯ್ ದೇವರಕೊಂಡ ಕೆಂಡಾಮಂಡಲವಾಗಿದ್ದಾರೆ.

ಚಿತ್ರದ ಟೀಸರ್‌ಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದ ಬೆನ್ನಲ್ಲೇ , ಇದರಲ್ಲಿನ ಲಿಪ್ ಲಾಕ್ ಸೀನ್ ಕಾರಣದಿಂದ ರಶ್ಮಿಕಾ ಟ್ರೋಲ್‌ಗೆ ಗುರಿಯಾಗಿದ್ದರು. ವಿಜಯ್ ದೇವರಕೊಂಡ ಟಾಲಿವುಡ್‌ನ ಇಮ್ರಾನ್ ಹಶ್ಮಿ ಎಂದಿದ್ದರು. ಗಂಭೀರ ವಿಚಾರವುಳ್ಳ ಸಿನಿಮಾದಲ್ಲಿ ಈ ರೀತಿಯ ದೃಶ್ಯಗಳು ಬೇಕಾಗಿರಲಿಲ್ಲ ಎಂಬ ಕಾಮೆಂಟ್‍ಗಳು ಹರಿದು ಬಂದಿದ್ದವು.

ತನ್ನನ್ನು ಇಮ್ರಾನ್ ಹಸ್ಮಿ ಎಂದು ಕರೆದಿದ್ದರ ಬಗ್ಗೆ ವಿಜಯ್ ದೇವರಕೊಂಡ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲವಂತೆ. ಆದರೆ ರಶ್ಮಿಕಾ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಯಾರಿಗೂ ತೊಂದರೆ ಮಾಡದ ಈ ಕಿಸ್ಸಿಂಗ್ ಸೀನ್ ಬಗ್ಗೆ ಯಾಕಿಷ್ಟು ಕೋಪತಾಪ ಎಂದು ಹೇಳಿದ್ದಾರೆ ಎನ್ನಲಾಗಿದೆ.