ನಾಗ್ಪುರ(ಫೆ:07): ನಾಗ್ಪುರದಲ್ಲಿ ನಡೆದ ಸೌರಾಷ್ಟ್ರ-ವಿದರ್ಭ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಸೌರಾಷ್ಟ್ರ ತಂಡ ಆಲೌಟ್ ಆಗುವ ಮೂಲಕ ಹೀನಾಯ ಸೋಲನ್ನನುಭವಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಗೆ ಇಳಿದ ಆತಿಥೇಯ ವಿದರ್ಭ ತಂಡಕ್ಕೆ ಆರಂಭಿಕ ಇನ್ನಿಂಗ್ಸ್ ನಲ್ಲಿ ಅಕ್ಷಯ್ ಕಾರ್ನೇವರ್ 73 ರನ್ ಹಾಗೂ ಅಕ್ಷಯ್ ವಾಡೇಕರ್ 45 ರನ್ ಗಳಿಸುವ ಮೂಲಕ ತಂಡಕ್ಕೆ ಬಲ ತುಂಬಿದರು ಮೊದಲ ಇನ್ನಿಂಗ್ಸ್ ನಲ್ಲಿ ತಂಡ 120.2 ಓವರ್ ಗಳಲ್ಲಿ 312 ರನ್ ಗಳಿಸಿತ್ತು,ಇನ್ನು ಸೌರಾಷ್ಟ್ರ ತಂಡ 117 ಓವರ್ ಗಳಲ್ಲಿ 307 ರನ್ ಕಲೆಹಾಕಿತು.

ದ್ವಿತೀಯ ಇನ್ನಿಂಗ್ಸ್ ನಲ್ಲಿ ವಿದರ್ಭ ತಂಡ 92.5 ಓವರ್ ಗಳಲ್ಲಿ 200 ರನ್ ಕಲೆಹಾಕಿತ್ತು. ಅಂತಿಮ ಇನ್ನಿಂಗ್ಸ್ ಆರಂಭಿಸಿದ ಸೌರಾಷ್ಟ್ರ ಬುಧವಾರ 28 ಓವರ್ ಗೆ ತನ್ನ ಅಮೂಲ್ಯ 5 ವಿಕೆಟ್ ಕಳೆದುಕೊಂಡು ಕೇವಲ 58 ರನ್ ಗಳಿಸಲಷ್ಟೇ ಸೀಮಿತವಾಯಿತು. ನಾಲ್ಕು ಪ್ರಮುಖ ಆಟಗಾರರ ಪೈಕಿ ಹಾರ್ವಿಕ್ ದೇಸಾಯ್ 8,ಸ್ನೆಲ್ 12,ಪೂಜಾರ 0,ಆರ್ಪಿತ್ ವಾಸವಾಡ 7 ರನ್ ಗಳಿಸಿದರು ಒಟ್ಟಾರೆ ಸೌರಾಷ್ಟ್ರ ತಂಡದ ಪ್ರಮುಖ ಆಟಗಾರರ ಕಳಪೆ ಆಟದ ಫಲವಾಗಿ ರಣಜಿ ಟ್ರೋಪಿ ವಿದರ್ಭ ತಂಡದ ಪಾಲಾಗಿದೆ.