ನವದೆಹಲಿ:(ಡಿ19): ವಾಜಪೇಯಿ ಅವರ ಆಳೆತ್ತರದ ಭಾವಚಿತ್ರವನ್ನು ಸಂಸತ್ತಿನ ಅಂಗಳದಲ್ಲಿ ಅಳವಡಿಕೆ ಮಾಡಲು ತೀರ್ಮಾನಿಸಿದ್ದು, ಡಿ25 ರಂದು ಉದ್ಘಾಟನ ಕಾರ್ಯ ನಡೆಯಲಿದೆ.

ಲೋಕಸಭೆಯ ಸ್ಪೀಕರ್ ಸುಮಿತ್ರಾ ಮಹಾಜನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಸತ್ ಭಾವಚಿತ್ರ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ತೆಗೆದು ಕೊಳ್ಳಲಾಗಿದೆ.

ವಾಜಪೇಯಿ ಅವರ ಜನ್ಮದಿನ ಡಿ25. ಅಂದೇ ಭಾವಚಿತ್ರ ಉದ್ಘಾಟನೆ ಮಾಡಲಾಗುತ್ತಿದೆ. ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ, ಗೃಹಸಚಿವ ರಾಜನಾಥ ಸಿಂಗ್, ವ್ಯವಹಾರ ಖಾತೆ ಸಚಿವ ನರೇಂದ್ರ ಸಿಂಗ್ ತೋಮರ್ ಭಾವಚಿತ್ರ ಉದ್ಘಾಟಿಸಲಿದ್ದಾರೆ.