ಮುಖದಲ್ಲಿ ಕಲೆಯಾದಾಗ ಕೆಲವು ಕೆಮಿಕಲ್‍ಯುಕ್ತ ವಸ್ತು ಹಚ್ಚುವುದರಿಂದ ಕೆಲವೊಮ್ಮೆ ರಿಯಾಕ್ಷನ್ ಆಗಿ ಮತ್ತಷ್ಟು ಗುಳ್ಳೆಗಳು ಜಾಸ್ತಿಯಾಗುತ್ತದೆ. ಇದರಿಂದ ಕೆಲವು ನೈಸರ್ಗಿಕ ವಸ್ತುಗಳು ಸಮಸ್ಯೆ ಬಗೆಹರಿಸುವಲ್ಲಿ ಭಾಗಿಯಾಗುತ್ತವೆ.

ಹಸಿ ಆಲೂಗಡ್ಡೆಯನ್ನು ಪೀಸ್ ಮಾಡಿ ಹಚ್ಚುವುದರಿಂದ ಮುಖದಲ್ಲಿ ಕಲೆಗಳು ಮಾಯವಾಗುತ್ತವೆ. ನಿದ್ದೆ ಸರಿಯಾಗದೆ ಕಣ್ಣು ಉರಿ ಉಂಟಾಗುವುದು ಹಾಗೂ ಕಣ್ಣು ಊದಿದರೆ ಆಲೂಗಡ್ಡೆಯ ಪೀಸನ್ನು ಕಣ್ಣಿನ ಮೇಲಿಟ್ಟು ಕೊಂಡರೆ ಕಡಿಮೆಯಾಗುತ್ತದೆ ಜೊತೆಗೆ ಸುಟ್ಟ ಗಾಯಕ್ಕೂ ಔಷಧಿಯಾಗಿದೆ.