ಬೆಂಗಳೂರು(ಡಿ:೨೮): ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯ ವೇಳೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಕೊಠಡಿಯಲ್ಲಿ ಡಿಜಿಟಲ್ ಸ್ಮಾರ್ಟ್ ವಾಚ್ ಬಳಕೆ ನಿಷೇಧಿಸುವುದಾಗಿ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಆದೇಶ ಹೊರಡಿಸಿದೆ .
ಪರೀಕ್ಷೆ ನಡೆಯುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಮಯ ಪಾಲನೆ ಮಾಡುವುದು ಅವಶ್ಯಕ ಆದರೆ ಡಿಜಿಟಲ್ ಅಥವಾ ಸ್ಮಾರ್ಟ್ ವಾಚ್ ಬಳಕೆ ಮಾಡಿದರೆ ಪರೀಕ್ಷೆ ನಕಲು ಮಾಡುವ ಸಾಧ್ಯತೆಗಳಿವೆ .
ಹಾಗಾಗಿ,ವಿದ್ಯಾರ್ಥಿಗಳು ಡಿಜಿಟಲ್ ವಾಚ್ ಬಳಸುವ ಬದಲಾಗಿ ಅನಲಾಗ್ ಕೈ ಗಡಿಯಾರವನ್ನು ಬಳಸಬಹುದು ಎಂದು ಮಂಡಳಿ ಅಧ್ಯಕ್ಷ ಡಾ. ಪಿ.ಸಿ ಜಾಫರ್ ಆದೇಶದಲ್ಲಿ ತಿಳಿಸಿದ್ದಾರೆ .