ವಾಷಿಂಗ್ಟನ್(ಫೆ,27): ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರ ದಾಳಿಗೆ ಭಾರತೀಯ ಸೇನೆ ಉಗ್ರರ ಮೂರು ಕ್ಯಾಂಪ್ ಗಳ ಮೇಲೆ ಬಾಂಬ್ ದಾಳಿ ಮಾಡಿ ಅಡಗುತಾಣಗಳನ್ನು ನಾಶ ಮಾಡಿದೆ.

ಈ ಬೆನ್ನಲ್ಲೇ ಪಾಕಿಸ್ತಾನ ಪ್ರತಿಕಾರ ತೀರಿಸುವು ಸಾಧ್ಯತೆಗಳು ಇದೆ. ಹೀಗಾಗಿ ಪಾಕಿಸ್ತಾನಕ್ಕೆ ಅಮೆರಿಕ ಖಡಕ್ ಎಚ್ಚರಿಕೆ ನೀಡಿದೆ. ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಮೆರಿಕ ಆಗ್ರಹಿಸಿದೆ. ಉಗ್ರರನ್ನು ಶಮನ ಮಾಡಬೇಕು ಇದರ ಬದಲು ಮಿಲಿಟರಿ ಕಾರ್ಯಾಚರಣೆ ನಡೆಸಬಾರದು ಎಂದು ಅಮೆರಿಕಾ ಪಾಕ್ ಗೆ ಎಚ್ಚರಿಕೆ ನೀಡಿದೆ.

ಪಾಕ್ ಉಗ್ರರ ವಿರುದ್ಧ ಇಂದು ಚೀನಾದಲ್ಲಿ ವಿದೇಶಾಂಗ ಸಚಿವರ ಮಹತ್ವದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಭಾರತ, ಚೀನಾ, ರಷ್ಯಾ ವಿದೇಶಾಂಗ ಸಚಿವರು ಪಾಲ್ಗೊಳ್ಳಲಿದ್ದು, ಸಭೆಯಲ್ಲಿ ಪುಲ್ವಾಮಾ ದಾಳಿ ಬಗ್ಗೆ ಪ್ರಸ್ತಾಪಿಸಲಿದ್ದಾರೆ ಎನ್ನಲಾಗಿದೆ.

ಫೆ. 14ರಂದು ಪಾಕ್ ಉಗ್ರನ ಆತ್ಮಾಹುತಿ ದಾಳಿಯಿಂದಾಗಿ 40 ಮಂದಿ ಯೋಧರು ಹುತಾತ್ಮರಾಗಿದ್ದರು. ಈ ಬೆನ್ನಲ್ಲೇ ಪಾಕಿಸ್ತಾನದ ಮೇಲೆ ದಾಳಿ ಮಾಡಬೇಕು ಎಂದು ಇಡೀ ದೇಶವೇ ಒಕ್ಕೊರಲಿನಿಂದ ಆಗ್ರಹಿಸಿತ್ತು. ಈ ಘಟನೆ ನಡೆದ 13ನೇ ದಿನಕ್ಕೆ ಭಾರತೀಯ ಯೋಧರು ಗಡಿ ನಿಯಂತ್ರಣ ರೇಖೆ ದಾಟಿ ಉಗ್ರರ ಅಡಗುತಾಣಗಳ ಮೇಲೆ ದಾಳಿ ಮಾಡಿ ಭಯೋತ್ಪಾದಕರನ್ನು ಮಟ್ಟ ಹಾಕಿದ್ದಾರೆ. ಈ ದಾಳಿಯಲ್ಲಿ 350 ಉಗ್ರರು ಸಾವನ್ನಪ್ಪಿದ್ದಾರೆ.