ನವದೆಹಲಿ(ಜ.17): ಅನಾರೋಗ್ಯದ ಕಾರಣ ವೈದ್ಯಕೀಯ ಪರೀಶಿಲನೆಗಾಗಿ ಕೇಂದ್ರ ಹಣಕಾಸು ಮಂತ್ರಿ ಅರುಣ್ ಜೇಟ್ಲಿ ಯು.ಎಸ್ ನಲ್ಲಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ಇನ್ನು ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಜೇಟ್ಲಿ ಅನಾರೋಗ್ಯದ ವಿಷಯ ಕೇಳಿ ಅಸಮಾಧಾನವಾಗಿದೆ. ಪ್ರತಿದಿನವೂ ಅವರ ಅಲೋಚನೆಗಳಿಗಾಗಿ ಹೋರಾಡುತ್ತದ್ದೆವು ಆದರೆ ಇಂದು ನಮ್ಮ ಕಾಂಗ್ರೆಸ್ ಪಕ್ಷ ಬೇಗ ಗುಣಮುಖರಾಗಿ ವಾಪಸ್ಸಾಗಲಿ ಎಂದು ಹಾಗೂ ಶೀಘ್ರವಾಗಿ ಚೇತರಿಸಿಕೊಳ್ಳಲು ನಾವು ಬಯಸುತ್ತೇವೆ. ಈ ಕಷ್ಟದ ಸಮಯದಲ್ಲಿ ನಾವೆಲ್ಲರು ನಿಮ್ಮ ಮತ್ತು ನಿಮ್ಮ ಕುಟುಂಬದವರ ಜೊತೆ ಇರುತ್ತೇವೆ ಜೇಟ್ಲಿ ಜಿ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

ವಾರಾಂತ್ಯದಲ್ಲಿ ಅವರು ಭಾರತಕ್ಕೆ ವಾಪಸ್ಸಗಾಲಿದ್ದಾರೆ ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ. ಬಜೆಟ್ ಮಂಡನೆಗೆ ಕೆಲವು ದಿನಗಳು ಮಾತ್ರ ಬಾಕಿ ಇದ್ದು, ಈ ಸಮಯದಲ್ಲಿ ಜೇಟ್ಲಿಯವರ ಅನಾರೋಗ್ಯ ಬಿಜೆಪಿ ನಾಯಕರಿಗೆ ಕಳವಳ ಮೂಡಿಸಿದೆ. ಕಳೆದ ವರ್ಷ ಮೂತ್ರಪಿಂಡದ ಕಸಿ ಮಾಡಿಸಿಕೊಂಡ ಬಳಿಕ ಅಮೇರಿಕಾದಲ್ಲಿ ನಿಯಮಿತ ವೈದ್ಯಕೀಯ ತಪಾಸಣೆ ಪಡೆಯುತ್ತಿದ್ದರು ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ಮಂಗಳವಾರ ತಿಳಿಸಿದೆ.