ಬೆಂಗಳೂರು:(ಫೆ08): ನಿಖಿಲ್ ಕುಮಾರ್ ಅಭಿನಯದ “ಸೀತಾರಾಮ ಕಲ್ಯಾಣ” ಸಿನಿಮಾ ರಾಜ್ಯಾದಾದ್ಯಂತ ಮೆಚ್ಚುಗೆ ಪಡೆದಿದ್ದು, ಈ ಸಿನಿಮಾವನ್ನು ಚೆನ್ನಾಂಬಿಕೆ ಫಿಲಂಸ್ ಬ್ಯಾನರ್ ಅಡಿ ಶ್ರೀಮತಿ ಅನಿತಾ ಕುಮಾರಸ್ವಾಮಿಯವರು ನಿರ್ಮಾಣ ಮಾಡಿದ್ದಾರೆ. ಆದರೆ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಯೂ ಟ್ಯೂಬ್‍ಗೆ ಅಪ್ಲೋಡ್ ಆಗಿದೆ. ಇದನ್ನು ಮನಗಂಡ ಸಿನಿಮಾದ ನಿರ್ಮಾಪಕಿ ಅನಿತಾ ಕುಮಾರಸ್ವಾಮಿ ಅವರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದು ತಿಳಿದುಬಂದಿದೆ.

ಈ ಸಿನಿಮಾವನ್ನು ಎ. ಹರ್ಷ ನಿರ್ದೇಶನ ಮಾಡಿದ್ದು, ಸಿಎಂ ಪುತ್ರ ನಿಖಿಲ್ ನಾಯಕನಾಗಿ ಕಾಣಿಸಿಕೊಂಡರೆ, ರಚಿತಾ ರಾಮ್ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರ ರಾಜ್ಯಾದಾದ್ಯಂತ ಜನವರಿ 25 ರಂದು ಬಿಡುಗಡೆಯಾಗಿದ್ದು, ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಅಂದರೆ ಫೆ 05 ರಂದು ಯೂ ಟ್ಯೂಬ್‍ಗೆ ಅಪ್ಲೋಡ್ ಆಗಿರುವುದು ಕಂಡುಬಂದಿದೆ.

ಥಿಯೇಟರ್‍ನಲ್ಲಿ ಪ್ರದರ್ಶನ ಕಾಣುವಾಗಲೆ ಯೂ ಟ್ಯೂಬ್‍ನಲ್ಲಿ ಹರಿದುಬಿಟ್ಟ ಕಿಡಿಗೇಡಿಗಳ ವಿರುದ್ಧ ಈಗ ಕಾಫಿರೈಟ್ಸ್ ಆಕ್ಟ್ ಹಾಗೂ ಇನ್ಫರ್ಮೇಶನ್ ಟೆಕ್ನಾಲಜಿ ಆಕ್ಟ್ ಅಡಿ ದೂರು ದಾಖಲಿಸಲಾಗಿದೆ. ಇನ್ನು ದೂರು ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.