ಬೆಂಗಳೂರು(ಫೆ.14): ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ಅವರು ತಮ್ಮ ಸ್ಥಿತಿಯನ್ನು ವಿವರಿಸಲು ರೇಪ್ ಉದಾಹರಣೆಯನ್ನು ಸದನದಲ್ಲಿ ಪ್ರಸ್ತಾಪಿಸಿರುವದಕ್ಕೆ ಮಹಿಳಾ ಶಾಸಕಿಯರಾದ, ಅನಿತಾ ಕುಮಾರಸ್ವಾಮಿ, ಅಂಜಲಿ ನಿಂಬಾಳ್ಕರ, ರೂಪಕಲಾ, ಶಶಿಧರ, ಲಕ್ಷ್ಮಿ ಹೆಬ್ಬಾಳಕರ, ಸೌಮ್ಯ ರೆಡ್ಡಿ ಮುಂತಾದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶ್ರೀಮತಿ ಅನಿತಾ ಕುಮಾರಸ್ವಾಮಿ ಹಾಗೂ ಇತರೇ ಮಹಿಳಾ ಶಾಸಕಿಯರು ದಿನಾಂಕ 12-02-2019 ರಂದು ವಿಧಾನಸಭೆಯ ಸಭಾಪತಿ ಶ್ರೀ ರಮೇಶ್ ಕುಮಾರರವರು ದೇವದುರ್ಗದ ನಿರೀಕ್ಷಣಾ ಮಂದಿರದಲ್ಲಿ ನಡೆದ ಆಡಿಯೋ ಹಗರಣದ ಬಗ್ಗೆ ಚರ್ಚಿಸುವ ಸಂದರ್ಭದಲ್ಲಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಾಗ ಯಾವ ರೀತಿ ವಿಚಾರಣೆ ನಡೆಯುತ್ತದೆ ಎಂಬುದರ ಬಗ್ಗೆ ಕೆಲವೊಂದು ಅಕ್ಷೇಪಾರ್ಹ ಪದಗಳನ್ನು ಬಳಸಿದ್ದರಿಂದ ಮಹಿಳೆಯರ ಮನಸ್ಸಿಗೆ ನೋವಾಗಿದ್ದು ರೇಪ್ ಬಗ್ಗೆ ನಿಡಿದ ವಿವರಣೆಯನ್ನು ವಿಧಾನಸಭೆ ಕಲಾಪದ ಕಡತದಿಂದ ತೆಗೆದು ಹಾಕುವ ಬಗ್ಗೆ ಅವರಲ್ಲಿ ಕೇಳಿಕೊಂಡಿದ್ದಾರೆ.