ಲಂಡನ್:(ಫೆ05): ಮಲ್ಯ ಅವರನ್ನು ಭಾರತ್ಕೆ ಹಸ್ತಾಂತರ ಮಾಡಲು ಬ್ರಿಟನ್‍ನ ಗೃಹ ಕಾರ್ಯದರ್ಶಿ ಸಜಿದ್ ಜಾವಿದ್ ಆದೇಶ ನೀಡಿದ್ದಾರೆ.

9,000 ಕೋಟಿ ರೂ ಸಾಲ ಮಾಡಿ ವಿದೇಶಕ್ಕೆ ತೆರಳಿದ ಮದ್ಯದೊರೆ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಫೆ 03 ರಂದು ಬ್ರಿಟನ್ ಕಾರ್ಯದರ್ಶಿ ಸಹಿ ಹಾಕಿದ್ದಾರೆಂದು, ಗೃಹ ಕಛೇರಿಯ ವಕ್ತಾರರು ತಿಳಿಸಿದ್ದಾರೆ.

ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಕೆ ಮಾಡಲು 14 ದಿನಗಳ ಕಾಲ ಅವಕಾಶವನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ.

2016 ರಲ್ಲಿ ದೇಶ ಬಿಟ್ಟು ಬ್ರಿಟನ್‍ಗೆ ತೆರಳಿದ ಮಲ್ಯ ಮತ್ತೆ ಸ್ವದೇಶಕ್ಕೆ ತೆರಳಲು ಬ್ರಿಟನ್‍ನಿಂದ ಅನುಮತಿ ನೀಡಲಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಈ ವಿಚಾರ ಯಾವ ಸ್ವರೂಪ ಪಡೆಯುತ್ತದೆ ಎಂಬುದನ್ನು ನೋಡಬೇಕಿದೆ.