ತಿರುವನಂತಪುರಂ (ಜ. 16): ಕಳೆದ ವಾರವಷ್ಟೆ ಕನಕದುರ್ಗ ಮತ್ತು ಬಿಂದು ಎಂಬ ಇಬ್ಬರು ಮಹಿಳೆಯರು ಶಬರಿಮಲೆಯನ್ನು ಪ್ರವೇಶಿಸಿ ಅಯ್ಯಪ್ಪಸ್ವಾಮಿ ದರ್ಶನ ಪಡೆದುಬಂದಿದ್ದು ದೇಶದೆಲ್ಲೆಡೆ ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಇಂದು ಮುಂಜಾನೆ ಇನ್ನಿಬ್ಬರು ಮಹಿಳೆಯರು ಶಬರಿಮಲೆ ಪ್ರವೇಶಿಸಲು ಮುಂದಾಗಿದ್ದು, ಕೇರಳದಲ್ಲಿ ಮತ್ತೆ ಭಾರೀ ಪ್ರತಿಭಟನೆ ಮುಂದುವರಿದಿದೆ.

ಇಂದು ಮುಂಜಾನೆ ಶಬರಿಮಲೆ ಪಂಪ ಬೇಸ್ ಕ್ಯಾಂಪ್‍ನಿಂದ ಬೆಟ್ಟವೇರಲು ಪ್ರಯತ್ನಿಸಿದ ಇಬ್ಬರು ಮಹಿಳೆಯರ ವಿರುದ್ಧ ಕೇರಳದ ಶಬರಿಮಲೆಯಲ್ಲಿ ಭಾರೀ ಪ್ರತಿಭಟನೆ ಎದ್ದಿದೆ. ಈ ಇಬ್ಬರು ಮಹಿಳೆಯರನ್ನು ಸುತ್ತುವರೆದಿದ್ದರು . ನಂತರ ಪೊಲೀಸರು ಭದ್ರತೆ ಮೂಲಕ ತಮ್ಮ ವಾಹನದಲ್ಲಿ ಕರೆತಂದಿದ್ದಾರೆ.

ಹಿಂದು ಕಾರ್ಯಕರ್ತರ ತೀವ್ರ ವಿರೋಧದ ನಡುವೆಯೂ ಹಲವು ಮಹಿಳೆಯರು ಶಬರಿಮಲೆ ಪ್ರವೇಶಿಸಲು ಮುಂದಾಗಿದ್ದರು. ಆದರೆ, ಅದರಲ್ಲಿ ಇಬ್ಬರು ಯಶಸ್ವಿಯಾಗಿದ್ದರು. ಅದಕ್ಕೂ ಮೊದಲು ಮೂವರು ಮಹಿಳೆಯರು ಶಬರಿಮಲೆ ಪ್ರವೇಶಿಸಿದ್ದಾರೆ ಎಂದು ಕೇರಳ ಪೊಲೀಸರು ತಿಳಿಸಿದ್ದರು. ಅಲ್ಲಿಗೆ ಇದುವರೆಗೆ 5 ಮಹಿಳೆಯರು ಶಬರಿಮಲೆಯನ್ನು ಪ್ರವೇಶಿದಂತಾಗಿದೆ.ಸುಪ್ರೀಂಕೋರ್ಟ್ 10 ವರ್ಷದಿಂದ 50 ವರ್ಷದೊಳಗಿನ ಮಹಿಳೆಯರು ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ತೆರಳಿ ದರ್ಶನ ಪಡೆಯಬಹುದು ಎಂದು ತೀರ್ಪು ನೀಡಿದೆ.