ನಂಜನಗೂಡು(ಜ:೦೨): ಹೊಸ ವರ್ಷ ಆಚರಣೆಗೆ ಆಗಮಿಸಿದ್ದ ಹೊರರಾಜ್ಯದ ಇಬ್ಬರು ಟೆಕ್ಕಿಗಳು ಕಪಿಲಾ ನದಿಯಲ್ಲಿ ಈಜಲು ಹೋಗಿ ಮೃತಪಟ್ಟಿದ್ದಾರೆ.

ಮೃತರನ್ನು ಉತ್ತರ ಪ್ರದೇಶದ ರಾಜೀವ್ ರಂಜನ್ ತಿವಾರಿ(೨೮) ಹಾಗೂ ಕೋಲ್ಕತ್ತಾ ಮೂಲದ ಸ್ನೇಹ ಆಶೀಸ್ ಚಕ್ರವರ್ತಿ(೨೯) ಎಂದು ಗುರುತಿಸಲಾಗಿದೆ.

ಸರಿಯಾಗಿ ಈಜು ಬಾರದ ಕಾರಣ ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ ಎಂದು ತಿಳಿದುಬಂದಿದ್ದು, ಸಂಜೆ ವೇಳೆಗೆ ಇಬ್ಬರ ಮೃತ ದೇಹ ಪತ್ತೆಯಾಗಿದೆ , ಈ ಸಂಬಂಧ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ .