ಬೆಂಗಳೂರು(ಜೂನ್.22) ಬೆಂಗಳೂರಿನ ಚರ್ಚ್ ಸ್ಟ್ರೀಟ್ ರಸ್ತೆಯಲ್ಲಿರುವ ಆಶ್ ಬೀರ್ ಪಬ್ ನಲ್ಲಿ ಮಟ್ಟಿಲು ಇಳಿಯುತ್ತಿರುವ ಸಂದರ್ಭದಲ್ಲಿ ಆಯತಪ್ಪಿ ಬಿದ್ದು ಇಬ್ಬರು ಸಾವಿಗೀಡಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಶಿವಮೊಗ್ಗ ಮೂಲದ ಪವನ್, ಕೆ.ಆರ್.ಪುರ ಮೂಲದ ವೇದಾ ಸಾವಿಗೀಡಾದ ದುರ್ದೈವಿಗಳು. ಆಶ್ ಬೀರ್ ಪಬ್ ಗೆ ತೆರಳಿದ್ದ ಇಬ್ಬರು ಮೂರನೇ ಮಹಡಿಯ ಮೇಲೆ ರೂಫ್ ಫರೋರ್ ನಲ್ಲಿ ಕುಳಿತು ಪಾರ್ಟಿ ಮಾಡುತ್ತಿದ್ದರು.

ಈ ಸಂದರ್ಭದಲ್ಲಿ ಕೈ ಕೈ ಹಿಡಿದು ನಿಂತಿದ್ದ ಇಬ್ಬರು ಕೆಳಗಿಳಿಯುವಾಗ ಕುಡಿದ ಮತ್ತಿನಲ್ಲಿ ಆಯಾತಪ್ಪಿ ಬಿದ್ದು ಸಾವಿಗೀಡಾಗಿದ್ದಾರೆ. ಮೇಲಿಂದ ಬಿದ್ದ ರಭಸಕ್ಕೆ ಪವನ್ ಮತ್ತು ವೇದಾ ತಲೆಯ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದ್ದರಿಂದ ತೀವ್ರ ರಕ್ತಸ್ರಾವವಾಗಿದೆ.

ಇದೇ ವೇಳೆ ಚರ್ಚ್ ಸ್ಟ್ರೀಟ್ ರೌಂಡ್ಸ್‍ನಲ್ಲಿದ್ದ ಕಮಿಷನರ್ ಅಲೋಕ್ ಕುಮಾರ್ ಕೂಡಲೇ ಅವರನ್ನು ಬೌರಿಂಗ್ ಆಸ್ಪತ್ರೆಗೆ ಸೇರಿಸಲಾಗಿದೆ. ಆಸ್ಪತ್ರೆ ತಲುಪುವಷ್ಟರಲ್ಲಿಯೇ ಇಬ್ಬರು ಸಾವನ್ನಪ್ಪಿದ್ದಾರೆ.

ಘಟನೆಗೆ ಸಂಬಂಧಪಟ್ಟಂತೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡಲಾಗಿದೆ. ಆಶ್ ಬೀರ್ ಪಬ್ ನ ಮಾಲೀಕ ಮತ್ತು ಮ್ಯಾನೇಜರ್ ಮೇಲೆ ಎಫ್ ಐಆರ್ ದಾಖಲು ಮಾಡಲಾಗಿದೆ.