ಚೆನ್ನೈ(ಫೆ.18): ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಸೌಂದರ್ಯ ಇತ್ತೀಚೆಗಷ್ಟೇ ಉದ್ಯಮಿ ವಿಶಾಖನ್ ಜತೆಗೆ ಹಸೆಮಣೆ ಏರಿದ್ದರು.

ಇವರಿಬ್ಬರು ಐಸ್ ಲ್ಯಾಂಡ್ ನಲ್ಲಿ ಹನಿಮೂನ್ ನಲ್ಲಿದ್ದು, ಈ ಸಂದರ್ಭದಲ್ಲಿ ತೆಗೆದ ಕೆಲವು ರೊಮ್ಯಾಂಟಿಕ್ ಫೋಟೋಗಳನ್ನು ಸೌಂದರ್ಯ ತಮ್ಮ ಟ್ವಿಟರ್ ಪೇಜ್ ನಲ್ಲಿ ಫೋಸ್ಟ್ ಮಾಡಿದ್ದರು. ಆದರೆ ಈ ಫೋಟ್‍ಗಳನ್ನು ನೋಡಿರುವ ನೆಟ್ಟಿಗರು ಗರಂ ಆಗಿದ್ದಾರೆ.

ಹೌದು ಇಡೀ ದೇಶವೇ ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಯಿಂದ ಯೋಧರನ್ನು ಕಳೆದುಕೊಂಡು ಕಂಬನಿ ಮಿಡಿಯುತ್ತಿದೆ. ಇಂತಹ ಸಂದರ್ಭದಲ್ಲಿ ಹನಿಮೂನ್ ಫೋಟೋಗಳನ್ನು ಹಾಕಿದ್ದಕ್ಕೆ ಸೌಂದರ್ಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ದೇಶವೇ ದುಃಖದಲ್ಲಿರುವಾಗ ನಿಮ್ಮ ಹನಿಮೂನ್ ಫೋಟೋಗಳನ್ನು ಹಾಕುವುದು ಸರಿಯಲ್ಲ ನೀವು ಎಂಜಾಯ್ ಮಾಡಿ. ಅದಕ್ಕೆ ನಮ್ಮ ತಕರಾರಿಲ್ಲ. ಆದರೆ ಹನಿಮೂನ್ ಫೋಟೋ ಹಾಕಲು ಎರಡು ದಿನ ತಡ್ಕೊಳ್ಳಿ. ಎಂದು ನೆಟ್ಟಿಗರು ಸೌಂದರ್ಯ ವಿರುದ್ಧ ಅಸಮಾಧನ ಹೊರಹಾಕಿದ್ದಾರೆ.

ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪೊರ ಪ್ರದೇಶದಲ್ಲಿ ಭಯೋತ್ಪಾದಕರು ಕಳೆದ ಗುರುವಾರ ಭೀಕರ ಬಾಂಬ್ ದಾಳಿ ನಡೆಸಿದ್ದರು. ಈ ವೇಳೆ ಮದ್ದೂರಿನ ಗುರು ಹೆಸರಿನ ಯೋಧ ಸೇರಿ 40 ಮಂದಿ ಸೈನಿಕರು ಹುತಾತ್ಮರಾಗಿದ್ದರು. 20 ವರ್ಷಗಳಲ್ಲಿ ನಡೆದ ದಾಳಿಗಳಲ್ಲಿ ಅತೀ ದೊಡ್ಡ ದಾಳಿ ಇದಾಗಿದೆ.