ಬೆಂಗಳೂರು:(ಫೆ18): ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಇಂದು ಆಯವ್ಯಯ ಮಂಡನೆಯಾಗುತ್ತಿದೆ. ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯ ಅಧ್ಯಕ್ಷೆಯಾದ ಹೇಮಲತಾ ಗೋಪಾಲಯ್ಯ ಬಜೆಟ್ ಮಂಡಿಸಲ್ಲಿದ್ದಾರೆ.

ಈ ಬಾರಿ ಬಿಬಿಎಂಪಿ ಅತಿ ಹೆಚ್ಚು ಮೊತ್ತದ ಬಜೆಟ್‍ನನ್ನು ಮಂಡಿಸಲಿದೆ ಎಂದು ಕೆಲವು ಮೂಲಗಳಿಂದ ತಿಳಿದು ಬಂದಿದೆ. ಇನ್ನು ಸಿಲಿಕಾನ್ ಸಿಟಿಯ ಜನರಿಗೆ ಈ ಸಾರಿಯ ಬಜೆಟ್ ಹೆಚ್ಚು ನಿರೀಕ್ಷೆಯ ಜೊತೆಗೆ ಕುತೂಹಲ ಮೂಡಿಸಿದೆ.

ಈ ಸಾರಿಯ ಬಿಬಿಎಂಪಿಯ ಬಜೆಟ್ ಮಂಡನೆ ಮಹಿಳಾ ಅಧ್ಯಕ್ಷರಿಂದಾಗುತ್ತಿದ್ದು, ಇದರಿಂದ ಪಿಂಕ್ ಬಜೆಟ್ ಎಂದು ಹೇಳಲಾಗುತ್ತಿದೆ. ಬಜೆಟ್‍ನಲ್ಲಿ ಮಹಿಳೆಯರ ಸಬಲೀಕರಣಕ್ಕೂ ಹೆಚ್ಚು ಆಧ್ಯತೆ ನೀಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಇನ್ನು ಬಿಬಿಎಂಪಿಯ ಪೌರ ಕಾರ್ಮಿಕರಿಗೂ ಸೌಲಭ್ಯದ ಜೊತೆಗೆ ಹೊಸ-ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರಿನ ಜನತೆಗೆ ಬಂಪರ್ ಕೊಡುಗೆ ಕೊಡುವ ಸಾಧ್ಯತೆಯಿದ್ದು, ಇನ್ನು ಈ ಬಾರಿಯ ಬಿಬಿಎಂಪಿ ಬಜೆಟ್ ಮಂಡನೆಗೆ ಕೆಲವೇ ಗಂಟೆಗಳು ಬಾಕಿವೆ.