ಬೆಂಗಳೂರು:(ನ15): ಕಿಚ್ಚ ಸುದೀಪ್ ನಟನೆಯ ಫೈಲ್ವಾನ್ ಚಿತ್ರದ ಟೀಸರ್ ಇಂದು ರಿಲೀಸ್ ಆಗಿದೆ. ಈ ಬಾರಿಯ ಸಂಕ್ರಾಂತಿಯಂದು ಸಿನಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಮೇಲೆ ಗುಡ್ ನ್ಯೂಸ್ ಅಂತಾನೆ ಹೇಳಬಹುದು.

ಸ್ಯಾಂಡಲ್‍ವುಡ್‍ನಲ್ಲಿ ಕೆಜಿಎಫ್ ಸಿನಿಮಾದ ನಂತರ ಮತ್ತೊಂದು ಹೆಸರು ಬರೆಯಲು ಹೊರಟಿರುವ ಫೈಲ್ವಾನ್ ಸಿನಿಮಾದ ಟೀಸರ್‍ನಲ್ಲಿ ಸುದೀಪ್ ಖಡಕ್‍ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ಟೀಸರ್‍ನಲ್ಲಿ ಕಿಚ್ಚನ ಫೈಟಿಂಗ್ ಸೀನ್‍ಗಳು ಅಭಿಮಾನಿಗಳನ್ನು ಪುಲ್‍ಫಿದಾ ಆಗುವಂತೆ ಮಾಡಿದೆ. “ಬಂದಾ ನೋಡು ಫೈಲ್ವಾನ್” ಎನ್ನುವ ವರ್ಡ್ ಅಭಿಮಾನಿಗಳು ಧೂಳೆಬ್ಬಿಸಿ ಕುಣಿಯುವಂತೆ ಮಾಡುತ್ತದೆ.