ಬೆಂಗಳೂರು:(ಜ17): ಪವನ್ ಒಡೆಯರ್ ನಿರ್ದೇಶನದ ಪುನೀತ್ ರಾಜ್‍ಕುಮಾರ್ ನಟನೆಯ ನಟ ಸಾರ್ವಭೌಮ ಸಿನಿಮಾದ ಲಿರಿಕಲ್ ವೀಡಿಯೊ ಸಾಂಗ್ ಇಂದು ರಿಲೀಸ್ ಆಗ್ತಾಯಿದೆ.

ಈಗಾಗಲೇ ಸಂಕ್ರಾಂತಿಯಂದು ರಿಲೀಸ್ ಆದ ದರ್ಶನ್ ಅಭಿನಯದ “ಯಜಮಾನ” ಸಿನಿಮಾದ ಲಿರಿಕಲ್ ವೀಡಿಯೊ ಸಾಂಗ್‍ಗೆ ಹಾಗೆಯೇ ನಿಖಿಲ್ ಅಭಿನಯದ “ಸೀತಾರಾಮ ಕಲ್ಯಾಣ” ಸಿನಿಮಾದ ಲಿರಿಕಲ್ ವೀಡಿಯೊ ಸಾಂಗ್‍ಗಳಿಗೆ ಯುಟ್ಯೂಬ್‍ನಲ್ಲಿ ಭಾರೀ ಲೈಕ್‍ಗಳ ಸುರಿ ಮಳೆಯೆ ಬಂದಿದೆ. ಜೊತೆಗೆ ಅಭಿಮಾನಿ ದೇವರುಗಳ ಮನಗೆದ್ದಿದೆ.

ಈಗ “ನಟಸಾರ್ವಭೌಮ” ಸಿನಿಮಾ ಕೂಡ ಭಾರೀ ಸದ್ದು ಮಾಡುತ್ತಿದ್ದು, ಇಂದು ಸಿನಿಮಾದ “ಯಾರೋ ನಾನು” ಲಿರಿಕಲ್ ವೀಡಿಯೊ ಸಾಂಗ್ ಬಿಡುಗಡೆಯಾಗುತ್ತಿದ್ದು, ಇನ್ನು ಬಿಡುಗಡೆಗೆ ಕೆಲವೇ ಗಂಟೆಗಳು ಬಾಕಿಯಿವೆ.